ಉತ್ತರಪ್ರದೇಶ ಕಾನೂನು ಸುವ್ಯವಸ್ಥೆಗೂ ಜಂಗಲ್ ರಾಜ್ ಗೂ ಯಾವುದೇ ವ್ಯತ್ಯಾಸವಿಲ್ಲ: ಕಾಂಗ್ರೆಸ್

ಉತ್ತರ ಪ್ರದೇಶ ಸರ್ಕಾರದ ಕಾನೂನು ಸುವ್ಯವಸ್ಥೆಗೂ ಹಾಗೂ ಜಂಗಲ್ ರಾಜ್ ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ....

Published: 13th June 2019 12:00 PM  |   Last Updated: 13th June 2019 06:12 AM   |  A+A-


Randeep Singh Surjewala

ರಣ್ ದೀಪ್ ಸಿಂಗ್ ಸುರ್ಜೆವಾಲಾ

Posted By : SD SD
Source : PTI
ನವದೆಹಲಿ: ಉತ್ತರ ಪ್ರದೇಶ ಸರ್ಕಾರದ ಕಾನೂನು ಸುವ್ಯವಸ್ಥೆಗೂ ಹಾಗೂ ಜಂಗಲ್ ರಾಜ್ ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಆಘಾತಕಾರಿ ಘಟನೆಯೊಂದರಲ್ಲಿ ಉತ್ತರ ಪ್ರದೇಶ ಬಾರ್ ಕೌನ್ಸಿಲ್ ನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದ ದರ್ವೇಶ್ ಯಾದವ್ ತಮ್ಮ ಸಹೋದ್ಯೋಗಿಯ ಗುಂಡೇಟಿಗೆ ಬಲಿಯಾಗಿದ್ದಾರೆ.

ಆಗ್ರಾ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಘಟನೆಯಲ್ಲಿ ಅಡ್ವೋಕೇಟ್ ಅರವಿಂದ್ ಕುಮಾರ್ ಮಿಶ್ರಾ ಅವರ ಕೋಣೆಯಲ್ಲಿ ಯಾದವ್  ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆದಿತ್ತು.

ಇನ್ನು ಮಿಶ್ರಾ ಮೇಲೆ ಗುಂಡು ಹಾರಿಸಿ ಹತ್ಯೆಗೈದ ಆರೋಪಿ ಅಡ್ವೋಕೇಟ್ ಮನೀಶ್ ಶರ್ಮಾ ತಾವೂ ಸ್ವಯಂ ಗುಂಡು ಹಾರಿಸಿಕೊಂಡಿದ್ದಾರೆ. ಆರೋಪಿ ಶರ್ಮಾ ಸ್ಥಿತಿ ಈಗ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಕೇವಲ ಎರಡು ದಿನಗಳ ಹಿಂದಷ್ತೇ ದರ್ವೇಶ್ ಯಾದವ್ ಬಾರ್ ಕೌನ್ಸಿಲ್ ಹುದ್ದೆಗೆ ಆಯ್ಕೆಯಾಗಿದ್ದರು. 

ಉತ್ತರ ಪ್ರದೇಶ ಸರ್ಕಾರದ ಕಾನೂನು ಸುವ್ಯವಸ್ಥೆಗೂ ಹಾಗೂ ಜಂಗಲ್ ರಾಜ್ ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp