ರೈಲಿನಲ್ಲಿ ಮಸಾಜ್ ಭಾರತೀಯ ಸಂಸ್ಕೃತಿಗೆ ವಿರುದ್ದ: ಬಿಜೆಪಿ ಸಂಸದ ಅಸಮಾಧಾನ

ಭಾರತೀಯ ರೈಲ್ವೆ ನೂತನ ಪ್ರಯೋಗವಾಗಿ ಚಲಿಸುತ್ತಿರುವ ರೈಲಿನಲ್ಲಿ ಪ್ರಯಾಣಿಕರಿಗೆ ತಲೆ ಹಾಗೂ ಪಾದಗಳ ಮಸಾಜ್ ಸೌಲಭ್ಯ ಒದಗಿಸಲು ತೀರ್ಮಾನಿಸಿದೆ. ಈ ಕುರಿತ ಪ್ರಾಯೋಗಿಕ ಉಪಕ್ರಮವಾಗಿ ಇಂದೋರ್ ನಿಂದ ಹೊರಡುವ 39 ರೈಲುಗಳಲ್ಲಿ....
ಶಂಕರ್ ಲಾಲ್ವಾನಿ
ಶಂಕರ್ ಲಾಲ್ವಾನಿ
ಇಂದೋರ್: ಭಾರತೀಯ ರೈಲ್ವೆ ನೂತನ ಪ್ರಯೋಗವಾಗಿ ಚಲಿಸುತ್ತಿರುವ ರೈಲಿನಲ್ಲಿ ಪ್ರಯಾಣಿಕರಿಗೆ ತಲೆ ಹಾಗೂ ಪಾದಗಳ ಮಸಾಜ್ ಸೌಲಭ್ಯ ಒದಗಿಸಲು ತೀರ್ಮಾನಿಸಿದೆ. ಈ ಕುರಿತ ಪ್ರಾಯೋಗಿಕ ಉಪಕ್ರಮವಾಗಿ ಇಂದೋರ್ ನಿಂದ ಹೊರಡುವ 39 ರೈಲುಗಳಲ್ಲಿ ಮಸಾಜ್ ಸೇವೆ ಪ್ರಾರಂಭಿಸುವ ಪ್ರಸ್ತಾವನೆ ಇದೆ. ಆದರೆ ಇದೀಗ ರೈಲ್ವೆನ ಈ ಪ್ರಯೋಗದ ಕುರಿತು ಇಂದೋರ್ ಬಿಜೆಪಿ ಸಂಸದರಿಂಡಲೇ ಟೀಕೆಗಳು ವ್ಯಕ್ತವಾಗಿದೆ. ರೈಲಿನಲ್ಲಿ ಮಸಾಜ್ ಸೌಲಭ್ಯವು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಇಂದೋರ್ ಸಂಸದ ಶಂಕರ್ ಲಾಲ್ವಾನಿ ಆರೋಪಿಸಿದ್ದಾರೆ.
ಈ ಸಂಬಂಧ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಜೂನ್ 10 ರಂದು ಪತ್ರ ಬರೆದಿರುವ ಲಾಲ್ವಾನಿ ಪ್ರಯಾಣಿಕರಿಗೆ ಮಸಾಜ್ ಸೌಲಭ್ಯ ಒದಗಿಸುವುದು ಸೂಕ್ತವಾದ ಕ್ರಮವಲ್ಲ, ವಿಶೇಷವಾಗಿ ಮಹಿಳಾ ಪ್ರಯಾಣಿಕರ ಉಪಸ್ಥಿತಿಯಲ್ಲಿ ಮಸಾಜ್ ಸೌಲಭ್ಯ ಕಲ್ಪಿಸುವುದು "ಪ್ರಾಮಾಣಿಕ" ಪ್ರಯೊಗವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಮಹಿಳೆಯರ ಮುಂದೆ ಇಂತಹಾ ಮಸಾಜ್ ಸೇವೆ ಕಲ್ಪಿಸುವುದು ಭಾರತೀಯ ಸಂಸ್ಕೃತಿಯ ತತ್ವಗಳಿಗೆ ಸರಿಯಾದದ್ದೆ? ಈ ಮಸಾಜ್ ಸೌಲಭ್ಯ ಬದಲಿಗೆ ಪ್ರಯಾಣಿಕರಿಗೆ ಚಲಿಸುವ ರೈಲಿನಲ್ಲೇ ವೈದ್ಯಕೀಯ ಸೇವೆ ಒದಗಿಸಬೇಕು, ವೈದ್ಯರನ್ನು ನೇಮಕ ಮಾಡಿ ರೈಲುಗಳಲ್ಲಿ ತಕ್ಷಣ ಚಿಕಿತ್ಸೆ ಒದಗಿಸಲು ಅನುಕೂಲ ಕಲ್ಪಿಸಬೇಕು" ಲಾಲ್ವಾನಿ ಪತ್ರದ ಮೂಲಕ ಅಭಿಪ್ರಾಯ ತಿಳಿಸಿದ್ದಾರೆ.
ಇಂದೋರ್ ನಿಂದ ಹೊರಡುವ  39 ರೈಲುಗಳಲ್ಲಿ ಸೇರಿದಂತೆ ಮುಂಬರುವ ದಿನಗಳಲ್ಲಿ ದೇಶದಾದ್ಯಂತ ರೈಲ್ವೆ ಪ್ರಯಾಣಿಕರಿಗೆ ಮಸಾಜ್ ಸೌಲಭ್ಯ ಒದಗಿಸುವ ಮೂಲಕ ರೈಲ್ವೆಗೆ ವಾರ್ಷಿಕವಾಗಿ ರೂ 20 ಲಕ್ಷ ಹೆಚ್ಚುವರಿ ಆದಾಯ ಬರಲಿದೆ, 0,000 ಮಸಾಜ್ ಸೇವಾಕರ್ತರು ರೈಲ್ವೆ ಟಿಕೆಟ್ ಪಡೆದುಕೊಳ್ಲುವುದರಿಂದ ವಾರ್ಷಿಕ  90 ಲಕ್ಷ ರೂ. ಹೆಚ್ಚುವರಿ ಟಿಕೆಟ್ ಮಾರಾಟ ಕಾಣಲಿದೆ ಎಂದು ರೈಲ್ವೆ ಇಲಾಖೆ ಅಂದಾಜಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com