ಜುಲೈ 6 ರಿಂದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಆರಂಭ

ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಜುಲೈ 6 ರಿಂದ ಆರಂಭವಾಗಲಿದೆ ಎಂದು ಪಕ್ಷ ಶುಕ್ರವಾರ ಪ್ರಕಟಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಜುಲೈ 6 ರಿಂದ ಆರಂಭವಾಗಲಿದೆ ಎಂದು ಪಕ್ಷ ಶುಕ್ರವಾರ ಪ್ರಕಟಿಸಿದೆ.
ಸದಸ್ಯತ್ವ ನೋಂದಣಿ ಅಭಿಯಾನ ಜುಲೈ 6 ರಿಂದ ಪ್ರಾರಂಭಗೊಂಡು ಆಗಸ್ಟ್ 10 ರವರೆಗೆ ನಡೆಯಲಿದೆ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸದಸ್ಯತ್ವ ನೊಂದಣಿ ಅಭಿಯಾನ ಪ್ರಕ್ರಿಯೆ ಮೇಲುಸ್ತುವಾರಿ ಸಮಿತಿಯ ಸಂಚಾಲಕ ಹೊಣೆಯನ್ನೂ ಶಿವರಾಜ್ ಸಿಂಗ್ ಚೌಹಾಣ್ ನಿಬಾಯಿಸಲಿದ್ದಾರೆ.
ಸಕ್ರಿಯ ಸದಸ್ಯತ್ವ ನೋಂದಣಿ ಅಭಿಯಾನ ಆಗಸ್ಟ್ 16-31ರವರೆಗೆ ನಡೆಯಲಿದ್ದು, ಸದಸ್ಯರ ಸಂಖ್ಯೆಯನ್ನು 2 ಕೋಟಿ ಹೆಚ್ಚಿಸುವ ಗುರಿಹೊಂದಲಾಗಿದೆ.
ಬಿಜೆಪಿ ಪ್ರಸ್ತುತ 11 ಕೋಟಿ ಸದಸ್ಯತ್ವ ಹೊಂದಿದ್ದು, ಬೂತ್ ಮಟ್ಟದ ಜತೆಗೆ ಸಮಾಜದ ಗಣ್ಯ ವ್ಯಕ್ತಿಗಳಿಗೂ ಪಕ್ಷದ ಸದಸ್ಯತ್ವ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಕರ್ನಾಟಕ, ಪುದುಚೆರಿ, ಲಕ್ಷ ದ್ವೀಪ, ಕಾಶ್ಮೀರ, ಒಡಿಶಾ, ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಸಿಕ್ಕಿಂ ಸೇರಿದಂತೆ ಕೆಲ ರಾಜ್ಯಗಳಲ್ಲಿ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದರು.
ಪ್ರತಿಯೊಂದು ಬೂತ್, ಮಂಡಲ, ಜಿಲ್ಲೆ ಹಾಗೂ ರಾಜ್ಯಗಳಲ್ಲೂ ಪಕ್ಷದ ಚಟುವಟಿಕೆ ತೀವ್ರಗೊಳಿಸಲಿದ್ದೇವೆ ಎಂದು ವಿವರಿಸಿದರು.
ಸಾರ್ವತ್ರಿಕ ಚುನಾವಣೆ ಮುಗಿದ ನಂತರ ಬಿಜೆಪಿ ಸಾಂಸ್ಥಿಕ ಚುನಾವಣೆಗೆ ಸಜ್ಜುಗೊಳ್ಳುತ್ತಿದೆ. ಉಸ್ತುವಾರಿಗಳ ಹೆಸರು ನಿರ್ಧರಿಸಿ ಪಟ್ಟಿಯನ್ನು ಆದಷ್ಟು ಶೀಘ್ರ ಪ್ರಕಟಿಸಲಾಗುವುದು ಎಂದು ಚೌಹಾಣ್ ಹೇಳಿದರು.
ಜೂನ್ 17 ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಭೆಯೊಂದನ್ನು ನಡೆಸಲಿದ್ದು, ನೋಂದಣಿ ಪ್ರಕ್ರಿಯೆ ಜೂನ್ 24 ರಂದು ಪೂರ್ಣಗೊಳ್ಳಲಿದೆ.
ದುಷ್ಯಂತ್ ಗೌತಮ್, ಸುರೇಶ್ ಪೂಜಾರಿ, ಅರುಣ್ ಚರ್ತವೇದಿ ಹಾಗೂ ಶೋಭಾ ಸುರೇಂದ್ರನ್ ನೋಂದಣಿ ಅಭಿಯಾನ ಸಮಿತಿಯ ಸಹ ಸಂಚಾಲಕರನ್ನಾಗಿ ನೇಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com