ಛತ್ತೀಸ್ ಗಢದಲ್ಲಿ ಎನ್ ಕೌಂಟರ್: ಇಬ್ಬರು ನಕ್ಸಲರ ಹತ್ಯೆ

ಕಳೆದ ರಾತ್ರಿ ಇಲ್ಲಿನ ಮಾಲೆಪರಾದಲ್ಲಿ ನಕ್ಸಲೀಯರು ಮತ್ತು ಜಿಲ್ಲಾ ಮೀಸಲು ಪಡೆ ಮಧ್ಯೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕಂಕರ್(ಛತ್ತೀಸ್ ಗಢ): ಕಳೆದ ರಾತ್ರಿ ಇಲ್ಲಿನ ಮಾಲೆಪರಾದಲ್ಲಿ ನಕ್ಸಲೀಯರು ಮತ್ತು ಜಿಲ್ಲಾ ಮೀಸಲು ಪಡೆ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ನಕ್ಸಲೀಯರು ಹತರಾಗಿದ್ದಾರೆ. 
ಟಡೊಕಿ ಪೊಲೀಸ್ ಠಾಣೆ ವಲಯದ ದಟ್ಟ ಅರಣ್ಯದಲ್ಲಿ ಎನ್ ಕೌಂಟರ್ ನಡೆದಿದ್ದು ಇಬ್ಬರು ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಕ್ಸಲ್ ವಿರೋಧಿ ಕಾರ್ಯಾಚರಣೆಯ ಡಿಐಜಿ ಪಿ ಸುಂದರ್ ರಾಜ್ ತಿಳಿಸಿದ್ದಾರೆ.
ಎನ್ ಕೌಂಟರ್ ನಡೆದ ಪ್ರದೇಶದಿಂದ ಎರಡು ಎಸ್ಎಲ್ಆರ್ ರೈಫಲ್ಸ್, ಒಂದು 303 ರೈಫಲ್ ಮತ್ತು ಇನ್ನೂ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com