ಜೂನ್ 30 ರಂದು ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್ '

ಎರಡನೇ ಬಾರಿ ದೇಶದ ಪ್ರಧಾನಿ ಗದ್ದುಗೆ ಅಲಂಕರಿಸಿರುವ ನರೇಂದ್ರ ಮೋದಿ ಮತ್ತೆ ಮನ್ ಕೀ ಬಾತ್ ಆರಂಭಿಸಲಿದ್ದಾರೆ...,.
ನರೇಂದ್ರ ಮೋದಿ
ನರೇಂದ್ರ ಮೋದಿ
ದೆಹಲಿ: ಎರಡನೇ ಬಾರಿ ದೇಶದ ಪ್ರಧಾನಿ ಗದ್ದುಗೆ ಅಲಂಕರಿಸಿರುವ ನರೇಂದ್ರ ಮೋದಿ ಮತ್ತೆ ಮನ್ ಕೀ ಬಾತ್ ಆರಂಭಿಸಲಿದ್ದಾರೆ.
2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿಯವರು ಅಕ್ಟೋಬರ್​ನಲ್ಲಿ ಮನ್​ ಕೀ ಬಾತ್​ ಎಂಬ ವಿನೂತನ ಕಾರ್ಯಕ್ರಮ ಪ್ರಾರಂಭಿಸಿದ್ದರು. ತಿಂಗಳಿಗೊಮ್ಮೆ ಆಕಾಶವಾಣಿ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
 ಜೂನ್ 30 ಬೆಳಗ್ಗೆ 11 ಗಂಟೆಗೆ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ಆರಂಭವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ನಮೋ ಆ್ಯಪ್ ಒಪನ್ ಪೋರಂ ನಲ್ಲಿ ಮನ್ ಕೀ ಬಾತ್ ಬಗ್ಗೆ ಚರ್ಚಿಸಬಹುದಾಗಿದೆ ಎಂದು ಮೋದಿ ಟ್ವೀಟ್ ಮಾಡಿಜದ್ದಾರೆ.
ಪ್ರಸಕ್ತ ವರ್ಷದ ಫೆಬ್ರುವರಿಯಲ್ಲಿ ಆಡಳಿತದ ಕೊನೆಯ ಮತ್ತು 53ನೇ ಮನ್​ ಕೀ ಬಾತ್​ ನಡೆಸಿ ಮುಕ್ತಾಯಗೊಳಿಸಿದ್ದರು. ದೇಶದ ಅನೇಕಾನಕ ಜನರ ಮನಗೆದ್ದ ಈ ಮನ್​ ಕೀ ಬಾತ್​ ಅನ್ನು ಮೋದಿಯವರು ಮತ್ತೆ ಈ ಬಾರಿ ಕೂಡ ನಡೆಸಲಿದ್ದು ಜೂನ್​ 30ರಂದು ಎರಡನೇ ಆವೃತ್ತಿಯ ಮೊದಲ ಕಾರ್ಯಕ್ರಮವಿದೆ.
ನರೇಂದ್ರ ಮೋದಿಯವರು ದೇಶದ ಜನರಿಗೆ ಸಂಬಂಧಪಟ್ಟ ಸಮಸ್ಯೆಗಳು, ವಿಚಾರಗಳ ಬಗ್ಗೆ ಮನ್​ ಕೀ ಬಾತ್​ದಲ್ಲಿ ಮಾತನಾಡಲಿದ್ದಾರೆ. ಹಾಗೇ ಅವರು ಯಾವ ವಿಷಯದ ಬಗ್ಗೆ ಮಾತನಾಡಬಹುದು ಎಂದು ಜನರೂ ಕೂಡ ತಿಳಿಸಬಹುದು. ಅದಕ್ಕೆ ಸಂಬಂಧಪಟ್ಟಂತೆ ಜೂ.11ರಿಂದ 26ರ ವರೆಗೆ ದೂರವಾಣಿ ಸಂಖ್ಯೆ 1800-11-7800ಗೆ ಕರೆ ಮಾಡಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com