ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಗಳ ಜಾಹೀರಾತು ನಿಷೇಧಿಸಿ: ಎಫ್ಎಸ್ಎಸ್ಎಐ

ಅನಾರೋಗ್ಯಕರ ಆಹಾರಗಳ ಜಾಹೀರಾತುಗಳನ್ನು ಶಾಲಾ ಆವರಣದ ಸುತ್ತಮುತ್ತ ಪ್ರಚಾರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಅನಾರೋಗ್ಯಕರ ಜಂಕ್ ಫುಡ್  ಜಾಹೀರಾತುಗಳನ್ನು ಶಾಲಾ ಆವರಣದ ಸುತ್ತಮುತ್ತ ಪ್ರಚಾರ ಮಾಡಬಾರದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಶಿಫಾರಸು ಮಾಡಿದೆ.
ಶಾಲಾ ಮಕ್ಕಳಿಗೆ ಗುಣಮಟ್ಟದ ಆರೋಗ್ಯಯುತ ಆಹಾರ ನೀಡಬೇಕು ಎಂದು ಪ್ರೋತ್ಸಾಹಿಸುವ ದೃಷ್ಟಿಯಿಂದ ಅನಾರೋಗ್ಯಕರ ಜಾಹೀರಾತುಗಳನ್ನು ಪ್ರದರ್ಶಿಸಬಾರದು ಎಂದು ಹೇಳಿದೆ.
ಎಫ್ಎಸ್ಎಸ್ಐಯ ಮುಖ್ಯ ಕಾರ್ಯಕಾರಿ ಅಧಿಕಾರಿ ಪವನ್ ಕುಮಾರ್ ಅಗರ್ವಾಲ್, ಈ ಕುರಿತು ಕರಡು ವರದಿ ತಯಾರಿಸಲಾಗಿದ್ದು ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಠಿಕಾಂಶಭರಿತ ಪೂರ್ಣಪ್ರಮಾಣದ ಆಹಾರವನ್ನು ನೀಡಬೇಕಾಗದ ಕುರಿತು ವರದಿಯನ್ನು ಆರೋಗ್ಯ ಸಚಿವಾಲಯಕ್ಕೆ ಅನುಮೋದನೆಗೆ ಕಳುಹಿಸಲಾಗಿದೆ ಎಂದರು. 
ಶಾಲಾ ಆವರಣದ ಸುತ್ತಮುತ್ತ 50 ಮೀಟರ್ ಸರಹದ್ದಿನಲ್ಲಿ ಅನಾರೋಗ್ಯಕರ ಆಹಾರಗಳಿಗೆ ಸಂಬಂಧಪಟ್ಟ ಜಾಹೀರಾತುಗಳನ್ನು ಪ್ರಚಾರ ಮಾಡಬಾರದು ಎಂದು ನಾವು ಪ್ರಸ್ತಾಪ ಸಲ್ಲಿಸಿದ್ದೇವೆ. 2015ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಶಾಲಾ ಆವರಣ ಸುತ್ತಮುತ್ತ ಎಂತಹ ಆಹಾರಗಳ ಜಾಹೀರಾತುಗಳನ್ನು ಪ್ರಚಾರ ಮಾಡಬೇಕೆಂದು ಆಹಾರ ಪ್ರಾಧಿಕಾರಿಗಳು ನಿಯಮ ಹೊರಡಿಸಬೇಕು ಎಂದು ಹೇಳಿತ್ತು. ಅದನ್ನು ಆಹಾರ ನಿಯಂತ್ರಣ ಪ್ರಾಧಿಕಾರ ಮುಂದುವರಿಸಲು ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com