ಮಮತಾಗೆ ತಲೆನೋವಾದ ಡಾಕ್ಟರ್ಸ್ ಸ್ಟ್ರೈಕ್: ಬಹಿರಂಗ ಚರ್ಚೆಗೆ ವೈದ್ಯರ ಪಟ್ಟು

ಪಶ್ಚಿಮ ಬಂಗಾಳದಲ್ಲಿ ಮುಷ್ಕರ ನಿರತ ಕಿರಿಯ ವೈದ್ಯರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮೊಡನೆ ನಡೆಸಲಿಚ್ಚಿಸಿರುವ ಸಭೆಯ ಸ್ಥಳ ನಿರ್ಧರಿಸಲು ಸ್ವತಂತ್ರರಿದ್ದಾರೆ, ಆದರೆ ಸಭೆ ಮುಕ್ತವಾಗಿ ನಡೆಯಬೇಕೆಂದು ಪ್ರತಿಪಾದಿಸಿದ್ದಾರೆ.
ಮಮತಾಗೆ ತಲೆನೋವಾದ ಡಾಕ್ಟರ್ಸ್ ಸ್ಟ್ರೈಕ್: ಬಹಿರಂಗ ಚರ್ಚೆಗೆ ವೈದ್ಯರ ಪಟ್ಟು
ಮಮತಾಗೆ ತಲೆನೋವಾದ ಡಾಕ್ಟರ್ಸ್ ಸ್ಟ್ರೈಕ್: ಬಹಿರಂಗ ಚರ್ಚೆಗೆ ವೈದ್ಯರ ಪಟ್ಟು
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮುಷ್ಕರ ನಿರತ ಕಿರಿಯ ವೈದ್ಯರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮೊಡನೆ ನಡೆಸಲಿಚ್ಚಿಸಿರುವ ಸಭೆಯ ಸ್ಥಳ ನಿರ್ಧರಿಸಲು ಸ್ವತಂತ್ರರಿದ್ದಾರೆ, ಆದರೆ ಸಭೆ ಮುಕ್ತವಾಗಿ ನಡೆಯಬೇಕೆಂದು ಪ್ರತಿಪಾದಿಸಿದ್ದಾರೆ.
ಈ ಹಿಂದೆ ಮಮತಾ ಬ್ಯಾನರ್ಜಿ ತಾವು ಮುಚ್ಚಿದ ಕೋಣೆಯಲ್ಲಿ ಚರ್ಚೆ ನಡೆಸಲು ಸಿದ್ದವೆಂದು ಶನಿವಾರ ಹೇಳಿಕೆ ನೀಡಿದ್ದರು.
ತಮ್ಮ ಆಡಳಿತ ಮಂಡಳಿಯ ಎರಡೂವರೆ ಗಂಟೆಗಳ ಸುದೀರ್ಘ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಿರಿಯ ವೈದ್ಯರ ಜಂಟಿ ವೇದಿಕೆಯ ವಕ್ತಾರರು, "ಈ ಬಿಕ್ಕಟ್ಟನ್ನು ಕೊನೆಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಸರ್ಕಾರದ ಮುಖ್ಯಸ್ಥರೊಡನೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ. ಅವರು ಸಭೆಯು ಎಲ್ಲಿ ನಡೆಯಬೇಕೆಂದು ಸ್ಥಳವನ್ನು ಆಯ್ಕೆ ಮಾಡುವುದಕ್ಕೆ ಸ್ವತಂತ್ರರು.  ಆದರೆ ಸಭೆಯು ಮುಕ್ತವಾಗಿ, ಮಾಧ್ಯಮ ವ್ಯಕ್ತಿಗಳ ಸಮ್ಮುಖದಲ್ಲಿ ನಡೆಯಬೇಕು ಹೊರತು ಮುಚ್ಚಿದ ಕೋಣೆಯಲ್ಲಲ್ಲ" ಎಂದಿದ್ದಾರೆ.
ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಪ್ರತಿನಿಧಿಗಳಿಗೆ  ಆಗುವಷ್ಟು ಶಾಲವಾದ ಸ್ಥಳ ಇರಬೇಕು ಎಂದು ವಕ್ತಾರರು ತಿಳಿಸಿದ್ದಾರೆ.ಈ ಹಿಂದೆ, ಮುಷ್ಕರದ ಕೇಂದ್ರಬಿಂದುವಾಗಿರುವ ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಬ್ಯಾನರ್ಜಿ ಭೇಟಿ ನೀಡಬೇಕೆಂದು ಚಳವಳಿಗಾರರು ಒತ್ತಾಯಿಸಿದ್ದರು.
"ನಮ್ಮ ಎಲ್ಲಾ ಬೇಡಿಕೆಗಳನ್ನು ಚರ್ಚೆಯ ಮೂಲಕ ಸಮರ್ಪಕವಾಗಿ ಮತ್ತು ತಾರ್ಕಿಕವಾಗಿ ಪೂರೈಸಿದ ನಂತರ ಸಾಮಾನ್ಯ ಜನರ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಬೇಗ ನಮ್ಮ ಕರ್ತವ್ಯಕ್ಕೆ ಮರಳಲು ನಾವು ಬಯಸುತ್ತೇವೆ." ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗಳುಸಿದ್ದವಾಗಿದ್ದಾರೆ ಎಂದು ನಾವು ಭಾವಿಸುತ್ತೇವೆ. ಆದರೆ ಪರಿಹಾರ ಒದಗುವವರೆಗೂ ಮುಷ್ಕರ ಮುಂದುವರಿಯಲಿದೆ." ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com