ರಾಮಮಂದಿರಕ್ಕೆ ಉದ್ಧವ್ ಠಾಕ್ರೆ ಪಟ್ಟು; ಸುಗ್ರೀವಾಜ್ಞೆಗೆ ಆಗ್ರಹ

17 ನೇ ಲೋಕಸಭೆಯ ಮೊದಲ ಅಧಿವೇಶನ ಪ್ರಾರಂಭಕ್ಕೂ ಮುನ್ನ ಶಿವಸೇನೆಯ ಸಂಸದರು ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಮಾಡಿದ್ದಾರೆ.

Published: 16th June 2019 12:00 PM  |   Last Updated: 16th June 2019 01:11 AM   |  A+A-


Shiv Sena chief Uddhav Thackeray makes strong pitch for Ram temple in Ayodhya, asks govt to bring ordinance

ರಾಮಮಂದಿರಕ್ಕೆ ಉದ್ಧವ್ ಠಾಕ್ರೆ ಪಟ್ಟು; ಸುಗ್ರೀವಾಜ್ಞೆಗೆ ಆಗ್ರಹ

Posted By : SBV SBV
Source : Online Desk
ಅಯೋಧ್ಯೆ: 17 ನೇ ಲೋಕಸಭೆಯ ಮೊದಲ ಅಧಿವೇಶನ ಪ್ರಾರಂಭಕ್ಕೂ ಮುನ್ನ ಶಿವಸೇನೆಯ ಸಂಸದರು ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಮಾಡಿದ್ದಾರೆ. 

ಅಯೋಧ್ಯೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ರಾಮ ಮಂದಿರ ಅತಿ ಶೀಘ್ರವೇ ನಿರ್ಮಾಣವಾಗಲಿದೆ ಎಂಬುದು ನಮ್ಮ ವಿಶ್ವಾಸ. ಸರ್ಕಾರ ಅಗತ್ಯವಾದರೆ ರಾಮಮಂದಿರಕ್ಕಾಗಿ ಸುಗ್ರೀವಾಜ್ಞೆ ಜಾರಿಗೊಳಿಸಬೇಕೆಂದು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ ಮಾಡಲು ಪ್ರಧಾನಿ ಮೋದಿ ಅವರಿಗೆ ಧೈರ್ಯ ಇದೆ. ಇಡೀ ಜಗತ್ತಿನಾದ್ಯಂತ ಇರುವ ಹಿಂದೂಗಳು ಅವರ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ಉದ್ಧವ್ ಠಾಕ್ರೆ ಇದೇ ವೇಳೆ ಹೇಳಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp