ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದ ಅಸ್ಸಾಂ ಮಹಿಳೆ ಈಗ ಬಾಂಗ್ಲಾದೇಶದಲ್ಲಿ ಜೀವಂತ ಪತ್ತೆ!

ಅಸಾಂನಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಭಾವಿಸಿ ಸಂಬಂಧಿಗಳು ಆಕೆಯ ಅಂತ್ಯಸಂಸ್ಕಾರ ಸಹ ನಡೆಸಿದ್ದರು....
ರುಪಾಲಿಯಾ ಬೈಲುಂಗ್
ರುಪಾಲಿಯಾ ಬೈಲುಂಗ್
ಗುವಾಹತಿ: ಅಸಾಂನಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಭಾವಿಸಿ ಸಂಬಂಧಿಗಳು ಆಕೆಯ ಅಂತ್ಯಸಂಸ್ಕಾರ ಸಹ ನಡೆಸಿದ್ದರು. ಆದರೆ ಇದೀಗ ಆ ಮಹಿಳೆ ಬಾಂಗ್ಲಾದೇಶದಲ್ಲಿ ಪತ್ತೆಯಾಗಿದ್ದು, ಜೀವಂತವಾಗಿದ್ದಾರೆ.
ಅಸ್ಸಾಂ ಸುದ್ದಿವಾಹಿನಿಯೊಂದು ಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ 41 ವರ್ಷದ ರುಪಾಲಿಯಾ ಬೈಲುಂಗ್ ಎಂಬ ಮಹಿಳೆ ಕಾಣಿಸಿಕೊಂಡಿದ್ದರು. ಅಲ್ಲದೆ ಬಾಂಗ್ಲಾದೇಶದ ಕಿಶನ್ ಭೂಮಿಜ್ ಎಂಬ ವ್ಯಕ್ತಿ ಆ ಮಹಿಳೆಯ ಫೋಟೋ ಮತ್ತು ವಿಡಿಯೋವನ್ನು ಫೋಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಾನಸಿಕ ಅಸ್ವಸ್ಥರಾಗಿರುವ ಅಸ್ಸಾಂನ ಈ ಮಹಿಳೆ ಬಾಂಗ್ಲಾದೇಶಕ್ಕೆ ಹೇಗೆ ಬಂದರು ಎಂಬುದು ಯಾರಿಗೂ ಗೊತ್ತಿಲ್ಲ. ರುಪಾಲಿಯಾ ಬಾಂಗ್ಲಾದೇಶದ ಮೌಲ್ವಿಬಜಾರ್ ಜಿಲ್ಲೆಯ ರಸ್ತೆಗಳಲ್ಲಿ ತಿರುಗಾಡುತ್ತಿದ್ದಾರೆ. ಸಾರ್ವಜನಿಕರು ನೀಡುವ ಆಹಾರ ಸೇವಿಸಿ ಜೀವನ ನಡೆಸುತ್ತಿದ್ದಾರೆ.
ರುಪಾಲಿಯಾ ಅವರು 2015ರಲ್ಲಿ ಅಸ್ಸಾಂನ ಧೆಮಜಿ ಜಿಲ್ಲೆಯ ಸಿಸ್ಸಿಬೊರಗಾಂವ್ ಪ್ರದೇಶದಿಂದ ನಾಪತ್ತೆಯಾಗಿದ್ದರು. ರುಪಾಲಿಯಾ ಮಾನಸಿಕ ಅಸ್ವಸ್ಥರಾಗಿದ್ದರೂ ಸದಾ ಮನೆಗೆ ಬರುತ್ತಿದ್ದರು. ಆದರೆ ಅಂದು ಮನೆಗೆ ಬರದೇ ದಿಢೀರ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ. ಆದರೆ ಕೆಲವು ದಿನಗಳ ನಂತರ ನದಿಯಲ್ಲಿ ಕೊಳತೆ ಸ್ಥಿತಿಯಲ್ಲಿದ್ದ ಮಹಿಳೆಯ ದೇವ ಪತ್ತೆಯಾಗಿತ್ತು. ಅದು ರುಪಾಲಿಯಾ ಇರಬೇಕು ಎಂದು ಭಾವಿಸಿ ನಾವು ಆ ದೇಹದ ಅಂತ್ಯ ಸಂಸ್ಕಾರ ನಡೆಸಿದ್ದೇವು ಎಂದು ರುಪಾಲಿಯಾ ಹಿರಿಯ ಸಹೋದರ ಜುಗಲ್ ಬೈಲುಂಗ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ರುಪಾಲಿಯಾ ಮಾನಸಿಕ ಅಸ್ವಸ್ಥರಾಗಿದ್ದರಿಂದ ಮದುವೆಯಾಗಿಲ್ಲ. ಈಗ ಆ ವಿಡಿಯೋದಲ್ಲಿರುವ ಮಹಿಳೆ ನನ್ನ ಸಹೋದರಿಯೇ ಆಗಿದ್ದು, ಆಕೆಯನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತರುವಂತೆ ಸ್ಥಳೀಯ ಶಾಸಕರನ್ನು ಮತ್ತು ಸಂಸದರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಅವರು, ಇದು ಮತ್ತೊಂದು ದೇಶದ ವಿಚಾರವಾಗಿರುವುದರಿಂದ ಈ ಕುರಿತು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com