ಹೈದರಾಬಾದ್: ಗ್ರಾಹಕರ ಜತೆ ಸೆಕ್ಸ್ ಗೆ ಒಪ್ಪದ ಬಾರ್ ಡ್ಯಾನ್ಸರ್ ಬಟ್ಟೆಬಿಚ್ಚಿ ಥಳಿತ, ನಾಲ್ವರ ಬಂಧನ

ಗ್ರಾಹಕರ ಜೊತೆ ಸೆಕ್ಸ್ ಗೆ ಒಪ್ಪದ ಬಾರ್ ಡ್ಯಾನ್ಸರ್ ಮೇಲೆ ಸಹೋದ್ಯೋಗಿ ಬಾರ್ ಡಾನ್ಸರ್ ಗಳೇ ಬಟ್ಟೆಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ...

Published: 17th June 2019 12:00 PM  |   Last Updated: 17th June 2019 07:25 AM   |  A+A-


Hyderabad bar dancer allegedly stripped, thrashed for refusing sex with customers

ಸಾಂದರ್ಭಿಕ ಚಿತ್ರ

Posted By : LSB LSB
Source : Online Desk
ಹೈದರಾಬಾದ್: ಗ್ರಾಹಕರ ಜೊತೆ ಸೆಕ್ಸ್ ಗೆ ಒಪ್ಪದ ಬಾರ್ ಡ್ಯಾನ್ಸರ್ ಮೇಲೆ ಸಹೋದ್ಯೋಗಿ ಬಾರ್ ಡಾನ್ಸರ್ ಗಳೇ ಬಟ್ಟೆಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ಹೈದರಾಬಾದ್ ನ ಬೇಗಂಪೇಟ್ ನಲ್ಲಿ ನಡೆದಿರುವುದಾಗಿ ಭಾನುವಾರ ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾದ ಯುವತಿ ಕೆಲ ತಿಂಗಳ ಹಿಂದೆ ಬೇಗಂಪೇಟ್ ನಗರದಲ್ಲಿರುವ ಪಬ್ ವೊಂದರಲ್ಲಿ ಡ್ಯಾನ್ಸರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲ ದಿನಗಳ ನಂತರ ಪಬ್ ಆಡಳಿತ ಮಂಡಳಿ, ಗ್ರಾಹಕರ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಡ್ಯಾನ್ಸರ್ ಗೆ ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಪಂಜಗುಟ್ಟ ಠಾಣಾ ಪೊಲೀಸರು ತಿಳಿಸಿದ್ದಾರೆ.

ಮ್ಯಾನೇಜ್ ಮೆಂಟ್ ಬೇಡಿಕೆಯನ್ನು ತಿರಸ್ಕರಿಸಿದ ಡ್ಯಾನ್ಸರ್, ಹಣಕ್ಕಾಗಿ ತಾನು ಮೈ ಮಾರಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಈ ಮಧ್ಯೆ ನಿನ್ನೆ ಗ್ರಾಹಕರೊಬ್ಬರ ಜೊತೆ ಸೆಕ್ಸ್ ಗೆ ಒಪ್ಪದಿದ್ದಾಗ ಓರ್ವ ವ್ಯಕ್ತಿ ಹಾಗೂ ನಾಲ್ವರು ಮಹಿಳಾ ಡ್ಯಾನ್ಸರ್ ಗಳು ಆಕೆಯನ್ನು ವಿವಸ್ತ್ರಗೊಳಿಸಿ, ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಮಹಿಳಾ ಆರೋಪಿಗಳನ್ನು ಬಂಧಿಸಿದ್ದಾರೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದ್ದು, ಪರಾರಿಯಾಗಿರುವ ಓರ್ವ ಆರೋಪಿಯ ಬಂಧನಕ್ಕೆ ಪೊಲೀಸ್​ ಕಾರ್ಯಾಚರಣೆ ನಡೆಯುತ್ತಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp