ಮತ್ತೆ ಪುಲ್ವಾಮದಲ್ಲಿ ಯೋಧರನ್ನು ಗುರಿಯಾಗಿರಿಸಿ ಭಯೋತ್ಪಾದಕರ ದಾಳಿ

ಫೆಬ್ರವರಿಯಲ್ಲಿ 40 ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣವಾಗಿದ್ದ ಭಯೋತ್ಪಾದಕ ದಾಳಿಯ ಕಹಿ ನೆನಪು ಇನ್ನೂ ಕಾಡುತ್ತಿದೆ. ಈ ಬೆನ್ನಲ್ಲೇ ಪುಲ್ವಾಮದಲ್ಲಿ ಮತ್ತೊಂದು ಭಯೋತ್ಪಾದಕ ಕೃತ್ಯ ನಡೆದಿದೆ.
ಮತ್ತೆ ಪುಲ್ವಾಮದಲ್ಲಿ ಯೋಧರನ್ನು ಗುರಿಯಾಗಿರಿಸಿ ಭಯೋತ್ಪಾದಕರ ದಾಳಿ
ಮತ್ತೆ ಪುಲ್ವಾಮದಲ್ಲಿ ಯೋಧರನ್ನು ಗುರಿಯಾಗಿರಿಸಿ ಭಯೋತ್ಪಾದಕರ ದಾಳಿ
ಪುಲ್ವಾಮ: ಫೆಬ್ರವರಿಯಲ್ಲಿ 40 ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣವಾಗಿದ್ದ ಭಯೋತ್ಪಾದಕ ದಾಳಿಯ ಕಹಿ ನೆನಪು ಇನ್ನೂ ಕಾಡುತ್ತಿದೆ. ಈ ಬೆನ್ನಲ್ಲೇ ಪುಲ್ವಾಮದಲ್ಲಿ ಮತ್ತೊಂದು ಭಯೋತ್ಪಾದಕ ಕೃತ್ಯ ನಡೆದಿದೆ. 
ಜೂ.17 ರಂದು ಭಯೋತ್ಪಾದಕರು ಸುಧಾರಿತ ಸ್ಫೋಟ ಸಾಧನ ಬಳಸಿ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಯೋಧರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ. 
ಈ ಬಾರಿಯೂ ಉಗ್ರರು ಯೋಧರ ಕನ್ವಾಯ್ ನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ. ಪುಲ್ವಾಮದ ಅರಿಹಲ್ ಗ್ರಾಮದಲ್ಲಿ ಭಯೋತ್ಪಾದಕರು ಐಇಡಿ ಸ್ಫೋಟ ನಡೆಸಿದ್ದಾರೆ. 
ಸ್ಫೋಟ ಸಂಭವಿಸುತ್ತಿದ್ದಂತೆಯೇ ಉಗ್ರರು-ಸೇನಾಪಡೆ ನಡುವೆ ಗುಂಡಿನ ಚಕಮಕಿ ಪ್ರಾರಂಭವಾಗಿದೆ. ಕ್ಯಾಸ್ಪರ್ ವಾಹನದ ಅಡಿಯಲ್ಲಿ ಐಇಡಿ ಸ್ಫೋಟಗೊಂಡಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 
ಕ್ಯಾಸ್ಪರ್ ವಾಹನ ಭೂಗತ ಸ್ಫೋಟ ನಿರೋಧಕ ವಾಹನವಾಗಿದ್ದು, ಭಯೋತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಇವುಗಳನ್ನು ಬಳಕೆ ಮಾಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com