ಉತ್ತರ ಪ್ರದೇಶ: ಸಂಸ್ಕೃತದಲ್ಲಿ ಮಾಧ್ಯಮ ಪ್ರಕಟಣೆ ಹೊರಡಿಸಿದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ!

ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇನ್ನು ಮುಂದಿನ ದಿನಗಳಲ್ಲಿ ಸಂಸ್ಕೃತ ಭಾಷೆಯಲ್ಲಿಯೂ ಮಾಧ್ಯಮ ಪ್ರಕಟಣೆ ಹೊರಡಿಸಲಿದೆ.

ಜೂ.17 ರಂದು ಮೊದಲ ಬಾರಿಗೆ ಸಂಸ್ಕೃತದಲ್ಲಿ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದೆ. ಸಂಸ್ಕೃತ ಭಾರತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥ್ ಸಂಸ್ಕೃತ ಭಾರತದ ಡಿಎನ್ಎಯ ಒಂದು ಭಾಗ ಎಂದು ಹೇಳಿದ್ದರು. 
ಸಂಸ್ಕೃತ ಈಗ ಧಾರ್ಮಿಕ ಮಂತ್ರ, ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿದೆ. ವಿಜ್ಞಾನ ಎಲ್ಲಿ ಕೊನೆಯಾಗುತ್ತದೋ ಅಲ್ಲಿ ಸಂಸ್ಕೃತ ಪ್ರಾರಂಭವಾಗುತ್ತದೆ. ಪ್ರತಿನಿತ್ಯದ ವ್ಯವಹಾರದಲ್ಲಿ ನಾವು ಸಂಸ್ಕೃತವನ್ನು ಬಳಕೆ ಮಾಡದೇ ಅದನ್ನು ದುರ್ಬಲಗೊಳಿಸಿದ್ದೇವೆ ಎಂದು ಆದಿತ್ಯನಾಥ್ ಹೇಳಿದ್ದರು. ಉತ್ತರ ಪ್ರದೇಶದಲ್ಲಿ ಅಂದಾಜು 25  ನಿಯತಕಾಲಿಕೆಗಳು ಪ್ರಕಟವಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com