ಓಂ ಬಿರ್ಲಾ ಲೋಕಸಭೆಯ ನೂತನ ಸ್ಪೀಕರ್ ಆಗಲು 10 ಪಕ್ಷಗಳ ಬೆಂಬಲ- ಪ್ರಹ್ಲಾದ್ ಜೋಷಿ

ನವದೆಹಲಿ: 17 ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಬಿಜೆಪಿ ಆಯ್ಕೆ ಮಾಡಿರುವ ಸಂಸದ ಓಂ ಬಿರ್ಲಾ ಅವರಿಗೆ 10 ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಪ್ರಹ್ಲಾದ್ ಜೋಷಿ
ಪ್ರಹ್ಲಾದ್ ಜೋಷಿ
ನವದೆಹಲಿ: 17 ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಬಿಜೆಪಿ ಆಯ್ಕೆ ಮಾಡಿರುವ ಸಂಸದ ಓಂ ಬಿರ್ಲಾ ಅವರಿಗೆ 10 ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ ಎಂದು ಕೇಂದ್ರ  ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ನಾಳೆ ಲೋಕಸಭೆಯ ಸ್ಪೀಕರ್ ಹುದ್ದೆ ಚುನಾವಣೆ ನಡೆಯಲಿದ್ದು, ರಾಜಸ್ತಾನದ ಕೊಟಾದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಓಂ ಬಿರ್ಲಾ ಅವರಿಗೆ ಬಿಜು ಜನತಾ ದಳ ವೈ ಎಸ್ ಆರ್  ಕಾಂಗ್ರೆಸ್ ಪಕ್ಷ ಸೇರಿದಂತೆ 10 ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸ್ಪೀಕರ್ ಹುದ್ದೆಗಾಗಿ ನಾಳೆ ಚುನಾವಣೆ ನಡೆಯಲಿದ್ದು, ಬಿಜೆಡಿ, ಶಿವಸೇನಾ, ಅಕಾಲಿ ದಳ, ಎನ್ ಪಿಪಿ,  ಎಂಎನ್ ಎಫ್, ಲೋಕ ಜನಾಶಕ್ತಿ ಪಾರ್ಟಿ, ವೈಎಸ್ ಆರ್ ಕಾಂಗ್ರೆಸ್ , ಜೆಡಿಯು, ಎಐಎಡಿಎಂಕೆ,  ಅಪ್ನಾ ದಳ ಪಕ್ಷಗಳು ಬೆಂಬಲ ನೀಡಿವೆ. ಕಾಂಗ್ರೆಸ್ ಮುಖಂಡರಾದ ಕೆ. ಸುರೇಶ್ , ಗುಲಾಂ ನಬಿ ಅಜಾದ್ ಜೊತೆಗೆ ಮಾತನಾಡಿದ್ದೇನೆ. ಈವರೆಗೂ ಅವರು ಸಹಿ ಮಾಡಿಲ್ಲ. ಆದರೆ, ಅವರು ಬಿರ್ಲಾರನ್ನು ವಿರೋಧಿಸುವುದಿಲ್ಲ ಅನ್ನಿಸುತ್ತಿದೆ ಎಂದು ಹೇಳಿದರು.
57 ವರ್ಷದ ಬಿರ್ಲಾ ಕೊಟಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮ್ನರೈನ್ ಮೀನಾ  ವಿರುದ್ಧ ಸುಮಾರು ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.  ಒಂದು ವೇಳೆ ಸ್ಪೀಕರ್ ಹುದ್ದೆಗೆ  ಅವರೇ ಆಯ್ಕೆಯಾದರೆ ಸುಮಿತ್ರಾ ಮಹಾಜನ್ ಅವರ ಉತ್ತರಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com