ಆಂಧ್ರ ಪ್ರದೇಶ: ರೈತರಿಗೆ ಹಗಲಿನಲ್ಲಿ 9 ಗಂಟೆ ವಿದ್ಯುತ್ ಪೂರೈಕೆ

ಆಂಧ್ರ ಪ್ರದೇಶದಲ್ಲಿನ ರೈತರಿಗೆ ಹಗಲಿನಲ್ಲಿ 9 ಗಂಟೆ ವಿದ್ಯುತ್ ಪೂರೈಸುವ ಸಂಬಂಧ ಒಂದು ವಾರದೊಳಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನಿರ್ದೇಶಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಿಜಯವಾಡ:ಆಂಧ್ರ ಪ್ರದೇಶದಲ್ಲಿನ ರೈತರಿಗೆ ಹಗಲಿನಲ್ಲಿ 9 ಗಂಟೆ ವಿದ್ಯುತ್ ಪೂರೈಸುವ 
ಸಂಬಂಧ ಒಂದು ವಾರದೊಳಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನಿರ್ದೇಶಿಸಿದ್ದಾರೆ.
ಹಗಲಿನಲ್ಲಿ ರೈತರಿಗೆ 9 ಗಂಟೆಗಳ ವಿದ್ಯುತ್ ಪೂರೈಕೆಯ ಪರಿಣಾಮಕಾರಿ ಅನುಷ್ಠಾನದ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ ಎಂದು ಅವರು ಹೇಳಿದ್ದಾರೆ.
ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಜಗನ್ ಮೋಹನ್ ರೆಡ್ಡಿ, 6,663 ಫೀಡರ್ ಗಳ ಮೂಲಕ ಕೃಷಿ ಹಾಗೂ ದೇಶಿ ವಲಯಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಈ ಪೈಕಿ ಶೇ, 60 ರಷ್ಟು 9 ಗಂಟೆ ವಿದ್ಯುತ್  ಪೂರೈಸುವ ಸಾಮರ್ಥ್ಯವನ್ನು ಪಡೆದಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. 
ಯಾವುದೇ ತಾಂತ್ರಿಕ ದೋಷಗಳಿದ್ದರೆ ಒಂದು ವಾರದೊಳಗೆ ಬಗೆಹರಿಸಿಕೊಂಡು ಪ್ರಾಯೋಗಿಕವಾಗಿ ಹಗಲಿನ ವೇಳೆಯಲ್ಲಿ  ರೈತರಿಗೆ 9 ಗಂಟೆ ವಿದ್ಯುತ್ ಪೂರೈಕೆ ಯೋಜನೆ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ.
ಅಕ್ರಮ ಮಧ್ಯ ಅಂಗಡಿಗಳನ್ನು ಆದಷ್ಟು ಬೇಗ ತೆರವುಗೊಳಿಸುವಂತೆ ಜಗನ್ ಮೋಹನ್ ರೆಡ್ಡಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com