ಅತ್ಯಾಚಾರ ಆರೋಪ: ಕೇರಳ ಸಿಪಿಎಂ ನಾಯಕನ ಪುತ್ರನ ವಿರುದ್ಧ ಕೇಸ್ ದಾಖಲು

ಅತ್ಯಾಚಾರ ಆರೋಪದ ಮೇಲೆ ಕೇರಳ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣ ಅವರ ಪುತ್ರ ಬಿನೋಯ್ ಕೊಡಿಯೆರಿ ಅವರ...

Published: 18th June 2019 12:00 PM  |   Last Updated: 18th June 2019 02:54 AM   |  A+A-


Kerala CPM leader Kodiyeri Balakrishnan's son booked for rape, cheating

ಸಾಂದರ್ಭಿಕ ಚಿತ್ರ

Posted By : LSB LSB
Source : The New Indian Express
ತಿರುವನಂತಪುರಂ: ಅತ್ಯಾಚಾರ ಆರೋಪದ ಮೇಲೆ ಕೇರಳ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣ ಅವರ ಪುತ್ರ ಬಿನೋಯ್ ಕೊಡಿಯೆರಿ ಅವರ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಈ ಮುಂಚೆ ದುಬೈನಲ್ಲಿ ಬಾರ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಮುಂಬೈ ಮೂಲದ 33 ವರ್ಷದ ಮಹಿಳೆ ಬಿನೋಯ್ ವಿರುದ್ಧ ಅತ್ಯಾಚಾರ ಹಾಗೂ ಮೋಸ ಮಾಡಿದ ಆರೋಪ ಮಾಡಿದ್ದಾರೆ.

ಬಿನೋಯ್ ತನ್ನನ್ನು ಮದುವೆಯಾಗುವದಾಗಿ ನಂಬಿಸಿ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಒಶಿವಾರ ಪೊಲೀಸ್ ಠಾಣೆಯಲ್ಲಿ ಸಿಪಿಎಂ ನಾಯಕನ ಪುತ್ರನ ವಿರುದ್ಧ ಕೇಸ್ ದಾಖಲಿಸಲಾಗಿದೆ.

ತಮ್ಮ ವಿರುದ್ಧದ ಅತ್ಯಾಚಾರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಬಿನೋಯ್ ಅವರು, ಮಹಿಳೆ ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ಈ ಸಂಬಂಧ ನಾನು ಈಗಾಗಲೇ ಮಹಿಳೆ ವಿರುದ್ಧ ಕಣ್ಣೂರ್ ಐಜಿಗೆ ದೂರು ನೀಡಿದ್ದೇನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇನ್ನು ಬಿನೋಯ್ ಮಹಿಳೆ ವಿರುದ್ಧ ತಮಗೆ ದೂರು ನೀಡಿರುವುದನ್ನು ಕಣ್ಣೂರ್ ಪೊಲೀಸರು ಖಚಿತಪಡಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಮಹಿಳೆ ವಿರುದ್ಧ ಕಣ್ಣೂರ್ ಪೊಲೀಸರು ಎಫ್ಐಆರ್ ದಾಖಲಿಸಲಿದ್ದಾರೆ ಎನ್ನಲಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp