ಗುರುಗ್ರಾಮ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಮುಂದೆ ಹಸ್ತಮೈಥುನ ಮಾಡಿ ವೀರ್ಯಾಣು ಸಿಡಿಸಿದ ಕಾಮುಕ

ವ್ಯಕ್ತಿಯೊಬ್ಬ ಮಹಿಳೆ ಮುಂದೆಯೇ ಹಸ್ತಮೈಥುನ ಮಾಡಿ, ವೀರ್ಯಾಣು ಸಿಡಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಹರಿಯಾಣದ ಗುರುಗ್ರಾಮದ...

Published: 18th June 2019 12:00 PM  |   Last Updated: 18th June 2019 04:19 AM   |  A+A-


Man flashes, masturbates on woman at Gurugram Metro Station, complaint filed

ಸಾಂದರ್ಭಿಕ ಚಿತ್ರ

Posted By : LSB LSB
Source : The New Indian Express
ಗುರುಗ್ರಾಮ: ವ್ಯಕ್ತಿಯೊಬ್ಬ ಮಹಿಳೆ ಮುಂದೆಯೇ ಹಸ್ತಮೈಥುನ ಮಾಡಿ, ವೀರ್ಯಾಣು ಸಿಡಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಹರಿಯಾಣದ ಗುರುಗ್ರಾಮದ ಹೂಡಾ ಸಿಟಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ಜೂನ್ 14ರಂದು ರಾತ್ರಿ 9.25ಕ್ಕೆ ಈ ಘಟನೆ ನಡೆದಿದ್ದು, ಈ ಸಂಬಂಧ 29 ವರ್ಷದ ಮಹಿಳೆ ಗುರುಗ್ರಾಮ ಪೊಲೀಸರಿಗೆ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.

ದೆಹಲಿ ಮೂಲದ ಮಹಿಳೆ ಗುರುಗ್ರಾಮ್‍ನಲ್ಲಿ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದರು. ಮಹಿಳೆ ಇಂಟೀರಿಯರ್ ಡಿಸೈನರ್ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅಂದು ಮೆಟ್ರೋ ನಿಲ್ದಾಣದ ಮಾಲ್‍ನಲ್ಲಿ ಶಾಪಿಂಗ್ ಮುಗಿಸಿ ಎಸ್ಕಲೇಟರ್ ಮೂಲಕ ಕೆಳಗೆ ಬರುತ್ತಿದ್ದಾಗ ನನ್ನ ಹಿಂದೆ ಇದ್ದ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರು. ಅಲ್ಲದೆ ನನ್ನ ಮೇಲೆಯೇ ವೀರ್ಯಾಣು ಸಿಡಿಸಲು ಯತ್ನಿಸಿದ. ಇದನ್ನು ಕಂಡು ನನಗೆ ಆಘಾತವಾಯಿತು. ಆದರೂ ಹೆದರದೆ ನಾನು ಆತನ ಕಪಾಳಕ್ಕೆ ಹೊಡೆದೆ ಎಂದು ಮಹಿಳೆ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ವೇಳೆ ನಾನು ಸಹಾಯಕ್ಕಾಗಿ ಕೂಗಿಕೊಂಡರೂ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಆದರೆ ನನ್ನ ಕಿರುಚಾಟದಿಂದ ಭಯಗೊಂಡ ವ್ಯಕ್ತಿ ಸ್ಥಳದಿಂದ ಪರಾರಿಯಾದನೂ ಎಂದು ಮಹಿಳೆ ಹೇಳಿರುವುದಾಗಿ ಎಚ್ ಟಿ ವರದಿ ಮಾಡಿದೆ.

ಹಸ್ತ ಮೈಥುನ ಮಾಡಿಕೊಂಡ ವ್ಯಕ್ತಿಯನ್ನು ಮಹಿಳೆ ಸಿಸಿಟಿವಿಯಲ್ಲಿ ಗುರುತಿಸಿದ್ದು, ಲಿಖಿತ ದೂರು ನೀಡುವಂತೆ ಗುರುಗ್ರಾಮ ಪೊಲೀಸರು ಮಹಿಳೆಗೆ ಸೂಚಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp