ಇಸ್ಲಾಂ ಗೆ ವಿರುದ್ಧವಾದ ವಂದೇ ಮಾತರಂ ನ್ನು ನಾವು ಹೇಳುವುದಿಲ್ಲ: ಸಮಾಜವಾದಿ ಪಕ್ಷದ ಸಂಸದ ಶಫೀಕರ್ ರೆಹಮಾನ್ ಬರ್ಕ್

ವಂದೇ ಮಾತರಂ ಇಸ್ಲಾಮ್ ಗೆ ವಿರುದ್ಧವಾಗಿದೆ, ಆದ್ದರಿಂದ ಅದನ್ನು ನಾವು ಹೇಳುವುದಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಶಫೀಕರ್ ರೆಹಮಾನ್ ಬರ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಸ್ಲಾಂ ಗೆ ವಿರುದ್ಧವಾದ ವಂದೇ ಮಾತರಂ ನ್ನು ನಾವು ಹೇಳುವುದಿಲ್ಲ: ಸಮಾಜವಾದಿ ಪಕ್ಷದ ಸಂಸದ ಶಫೀಕರ್ ರೆಹಮಾನ್ ಬರ್ಕ್
ಇಸ್ಲಾಂ ಗೆ ವಿರುದ್ಧವಾದ ವಂದೇ ಮಾತರಂ ನ್ನು ನಾವು ಹೇಳುವುದಿಲ್ಲ: ಸಮಾಜವಾದಿ ಪಕ್ಷದ ಸಂಸದ ಶಫೀಕರ್ ರೆಹಮಾನ್ ಬರ್ಕ್
ನವದೆಹಲಿ: ವಂದೇ ಮಾತರಂ ಇಸ್ಲಾಮ್ ಗೆ ವಿರುದ್ಧವಾಗಿದೆ, ಆದ್ದರಿಂದ ಅದನ್ನು ನಾವು ಹೇಳುವುದಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಶಫೀಕರ್ ರೆಹಮಾನ್ ಬರ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿರುವ ಶಫೀಕರ್ ರೆಹಮಾನ್ ಬರ್ಕ್, ವಂದೇ ಮಾತರಂ ಇಸ್ಲಾಂ ಗೆ ವಿರುದ್ಧವಾಗಿದೆ. ಆದ್ದರಿಂದ ನಾವು ಅದನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಸಂಸತ್ ನಲ್ಲಿ ನೂತನ ಸಂಸತ್ ಸದಸ್ಯರ ಪ್ರಮಾಣ ವಚನ ಸ್ವೀಕಾರದ ವೇಳೆ ವಂದೇ ಮಾತರಂ, ಜೈ ಶ್ರೀರಾಮ್ ಘೋಷಣೆಗಳು ಮೊಳಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಶಫೀಕರ್ ರೆಹಮಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಶಫೀಕರ್ ರೆಹಮಾನ್ 2013 ರಲ್ಲಿ ಸಂಸತ್ ನಲ್ಲಿ ವಂದೇ ಮಾತರಂ ಗೀತೆ ಮೊಳಗಿದ ವೇಳೆ ಸಂಸತ್ ನಿಂದ ಹೊರನಡೆದು ವಿವಾದಕ್ಕೀಡಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com