ವಿದೇಶದಲ್ಲಿ ಒಂದು ವಾರ ವಿಶ್ರಾಂತಿ ಪಡೆದು ಮರಳಿದ ರಾಹುಲ್ : ಕಾಂಗ್ರೆಸ್ ನಲ್ಲಿ ಶೀಘ್ರ ಬದಲಾವಣೆ ಸಾಧ್ಯತೆ

ವಿದೇಶದಲ್ಲಿ ಒಂದು ವಾರ ವಿರಾಮ ಕಳೆದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮರಳಿದ್ದು, ಕಾಂಗ್ರೆಸ್ ನಲ್ಲಿ ಶೀಘ್ರ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ವಿದೇಶದಲ್ಲಿ ಒಂದು ವಾರ ವಿರಾಮ ಕಳೆದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮರಳಿದ್ದು, ಕಾಂಗ್ರೆಸ್ ನಲ್ಲಿ ಶೀಘ್ರ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.
ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ಬಗ್ಗೆ ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಹಾಗೂ ಸಹೋದರಿ ಪ್ರಿಯಾಂಕಾ ಗಾಂಧಿ ಅವರಿಗೆ ಹೇಳಿದ್ದು, ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ, ರಾಜ್ಯ ವಿಧಾನಸಭಾ ಚುನಾವಣೆ ಹಾಗೂ ರಾಜ್ಯ ಘಟಕಗಳು ಹಾಗೂ ಪದಾಧಿಕಾರಿಗಳ ಬದಲಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಇಂದು ಲೋಕಸಭೆಯಲ್ಲಿ  ವೈನಾಡು ಕ್ಷೇತ್ರದ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ರಾಹುಲ್ ಗಾಂಧಿ ಆಗಮನದೊಂದಿಗೆ ಲೋಕಸಭೆಯಲ್ಲಿ ಪಕ್ಷವನ್ನು ಯಾರು ಮುನ್ನಡೆಸಬೇಕು ಮತ್ತಿತರ ಸಂಬಂಧ ಒಂದೇರಡು ದಿನಗಳಲ್ಲಿ ಅಂತಿಮವಾಗುವ ಸಾಧ್ಯತೆ ಇದೆ. ಹಿರಿಯ ಕಾಂಗ್ರೆಸ್ ಸಂಸದ ಕೇರಳದ ಕೆ ಸುರೇಶ್  ಲೋಕಸಭೆಯಲ್ಲಿ ಪಕ್ಷದ ನಾಯಕತ್ವ ಸಂಬಂಧ ಹಲವು ಸುತ್ತಿನ ಮಾತುಕತೆ ನಡೆದಿದೆ. 
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲೂ ಕೆ. ಸುರೇಶ್ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದರು. ಮೋದಿ ನಂತರ ಎರಡನೇವರಾಗಿ ಕೆ. ಸುರೇಶ್ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಪಂಜಾಬಿನ ಸಂಸದ ಮನೀಷ್ ತಿವಾರಿ, ಪಶ್ಚಿಮ ಬಂಗಾಳ  ಸಂಸದ ಅಧೀರ್ ರಂಜನ್ ಚೌದರಿ ಹೆಸರು ಕೂಡಾ ಕೇಳಿಬರುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com