ಚುನಾವಣೆಗೆ ಮಿತಿ ಮೀರಿ ಖರ್ಚು ಮಾಡಿದ ಸನ್ನಿ ಡಿಯೋಲ್ ಗೆ ನೋಟಿಸ್

ಇತ್ತೀಚಿಗಷ್ಟೇ ಮುಕ್ತಾಯವಾದ ಲೋಕಸಭೆ ಚುನಾವಣೆಯಲ್ಲಿ ನಿಗದಿಪಡಿಸಲಾಗಿದ್ದ 70 ಲಕ್ಷ ರುಪಾಯಿ ವೆಚ್ಚದ ಮಿತಿಯನ್ನು ಮೀರಿ ಹೆಚ್ಚು ಖರ್ಚು ಮಾಡಿದ...

Published: 19th June 2019 12:00 PM  |   Last Updated: 19th June 2019 07:39 AM   |  A+A-


EC issues notice to Sunny Deol for exceeding Rs 70 lakh poll expense limit

ಸನ್ನಿ ಡಿಯೋಲ್

Posted By : LSB LSB
Source : PTI
ಚಂಡಿಘಢ: ಇತ್ತೀಚಿಗಷ್ಟೇ ಮುಕ್ತಾಯವಾದ ಲೋಕಸಭೆ ಚುನಾವಣೆಯಲ್ಲಿ ನಿಗದಿಪಡಿಸಲಾಗಿದ್ದ 70 ಲಕ್ಷ ರುಪಾಯಿ ವೆಚ್ಚದ ಮಿತಿಯನ್ನು ಮೀರಿ ಹೆಚ್ಚು ಖರ್ಚು ಮಾಡಿದ ಬಾಲಿವುಡ್ ನಟ ಹಾಗೂ ಗುರ್ದಾಸ್ಪುರ್ ಸಂಸದ ಸನ್ನಿ ಡಿಯೋಲ್ ಅವರಿಗೆ ಬುಧವಾರ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಗುರ್ದಾಸ್ಪುರ್ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ವಿಪೂಲ್ ಉಜ್ವಲ್ ಅವರು ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅವರು ಚುನಾವಣೆಗೆ 70 ಲಕ್ಷ ರು. ಗಿಂತ ಹೆಚ್ಚು ಖರ್ಚು ಮಾಡಿರುವುದು ಪತ್ತೆಯಾಗಿದೆ ಎಂದಿದ್ದಾರೆ.

ಉಜ್ವಲ್ ಅವರು ಸನ್ನಿ ಡಿಯೋಲ್ ಚುನಾವಣಾ ವೆಚ್ಚದ ವಿವರ ನೀಡಲು ನಿರಾಕರಿಸಿದ್ದಾರೆ. ಆದರೆ ಬಾಲಿವುಡ್ ನಟ 86 ಲಕ್ಷ ರುಪಾಯಿ ವೆಚ್ಚ ಮಾಡಿರುವುದು ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಚುನಾವಣಾ ಪ್ರಕ್ರಿಯೆ ಮುಗಿದ 90 ದಿನಗಳ ಒಳಗೆ ನೋಂದಾಯಿತ ರಾಜಕೀಯ ಪಕ್ಷಗಳು ಚುನಾವಣೆಗಾಗಿ ತಾವು ಖರ್ಚು ಮಾಡಿರುವ ಹಣದ ಲೆಕ್ಕಪತ್ರವನ್ನು ಆಯೋಗಕ್ಕೆ ಸಲ್ಲಿಸಬೇಕಿದೆ.
Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp