'ಜಿಹಾದ್' ಪದ ಬಳಸುವವರೆಲ್ಲಾ ಭಯೋತ್ಪಾದಕರಲ್ಲ: ಮಹಾರಾಷ್ಟ್ರ ಕೋರ್ಟ್

"ಜಿಹಾದ್" ಎಂಬ ಪದವನ್ನು ಬಳಸಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಬ್ರಾಂಡ್ ಮಾಡಲು ಸಾಧ್ಯವಿಲ್ಲ, ಎಂದು ಮಹಾರಾಷ್ಟ್ರದ ನ್ಯಾಯಾಲಯವೊಂದು ಅಭಿಪ್ರಾಯಪಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: "ಜಿಹಾದ್" ಎಂಬ ಪದವನ್ನು ಬಳಸಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಬ್ರಾಂಡ್ ಮಾಡಲು ಸಾಧ್ಯವಿಲ್ಲ, ಎಂದು ಮಹಾರಾಷ್ಟ್ರದ ನ್ಯಾಯಾಲಯವೊಂದು ಅಭಿಪ್ರಾಯಪಟ್ಟಿದೆ. ಭಯೋತ್ಪಾದನೆ ಆರೋಪದ ಮೂವರು ಆರೋಪಿಗಳನ್ನು ಖುಲಾಸೆಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಮಹತ್ವದ ತೀರ್ಮಾನ ಹೇಳಿದೆ.
ಅಕೋಲಾ ಮೂಲದ ವಿಶೇಷ ನ್ಯಾಯಾಧೀಶ ಎ ಎಸ್ ಜಾಧವ್  ಅವರನ್ನೊಳಗೊಂಡ ನ್ಯಾಯಾಲಯವು ಕಠಿಣ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಬಾಂಬೆ ಪೊಲೀಸ್ ಕಾಯ್ದೆಯಡಿ ಆರೋಪಿಗಳಾದ ಮೂವರ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದೆ.
ಅಬ್ದುಲ್ ರಜಾಕ್(24),ಶೋಯಬ್ ಖಾನ್  (24) ಮತ್ತು ಸಲೀಮ್ ಮಲಿಕ್ (26) ಅವರ ಮೇಲೆ 307 (ಕೊಲೆ ಯತ್ನ) ಮತ್ತು 332 (ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯದಿಂದ ತಡೆಯಲು ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡುವಿಕೆ)ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆ ವಿಭಾಗಗಳ ಡಿ ಪ್ರಕರಣ  ದಾಖಲಿಸಲಾಗಿದೆ. ರಾಜ್ಯದಲ್ಲಿ ಗೋಮಾಂಸ ನಿಷೇಧದ ಕುರಿತು ಈದ್ ಸಮಯದಲ್ಲಿ 2015 ರ ಸೆಪ್ಟೆಂಬರ್ 25 ರಂದು ಅಕೋಲಾದ ಪುಸಾದ್ ಪ್ರದೇಶದ ಮಸೀದಿಯ ಹೊರಗೆ ಪೊಲೀಸರ ಮೇಲೆ ಹಲ್ಲೆ.ಮಾಡಿದ ಆರೋಪ ಇವರ ಮೇಲಿದೆ.
ಪ್ರಾಸಿಕ್ಯೂಷನ್ ಪ್ರಕಾರ ರಜಾಕ್ ಮಸೀದಿಗೆ ಆಗಮಿಸಿ, ಚಾಕುವನ್ನು ತೆಗೆದುಕೊಂಡು ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರನ್ನು ಇರಿದು ದಾಳಿಗೆ ಮೊದಲಾಗಿದ್ದಾನೆ. ಗೋಮಾಂಸ ನಿಷೇಧ ಹಿಂಪಡೆಯಬೇಕೆಂದು ಪೋಲೀಸರನ್ನು ಕೊಲ್ಲಲು ಮುಂಡದ ಅವನು ಅಭಿಪ್ರಾಯಪಟ್ಟಿದ್ದಾನೆ. ಭಯೋತ್ಪಾದನಾ ಸಂಘಟನೆಗಳಿಗೆ ಸೇರಲು ಮುಸ್ಲಿಂ ಯುವಕರ ಮೇಲೆ ಪ್ರಭಾವ ಬೀರುವ ಪಿತೂರಿಯ ಭಾಗ ಇದಾಗಿತ್ತೆಂದು ಅವರು ಆರೋಪಿಸಿದ್ದಾರೆ.
ಆದರೆ ವಾದ ಆಲಿಸಿದ ನ್ಯಾಯಾಲಯ "ಅವರು 'ಜಿಹಾದ್' ಪದವನ್ನು ಬಳಸಿದ್ದಾರೆಂಬುದರಲ್ಲಿ ಸಂಶಯವಿಲ್ಲ. ಆದರೆ, 'ಜಿಹಾದ್' ಪದವನ್ನು ಬಳಸುವುದಕ್ಕಾಗಿ ಮಾತ್ರ ಅವರನ್ನು ಭಯೋತ್ಪಾದಕರೆಂದು ಬ್ರಾಂಡ್ ಮಾಡಲು ಬರುವುದಿಲ್ಲ.ನಿಘಂಟಿನ ಪ್ರಕಾರ, 'ಜಿಹಾದ್' ಎಂಬ ಪದದ ಅರ್ಥ "ಹೋರಾಟ" ಎಂದಾಗುತ್ತದೆ ಎಂದು ಹೇಳಿದೆ.
"ಜಿಹಾದ್ ಎಂಬುದು ಅರೇಬಿಕ್ ಪದವಾಗಿದ್ದು, ಇದರ ಅರ್ಥ ಅಕ್ಷರಶಃ ಶ್ರಮಿಸುವುದು ಅಥವಾ ಹೆಣಗಾಡುವುದು. ಆದ್ದರಿಂದ ಕೇವಲ 'ಜಿಹಾದ್' ಪದವನ್ನು ಬಳಸಿದ ಮಾತ್ರಕ್ಕೆ ಆತನನ್ನು ಭಯೋತ್ಪಾದಕ ಎಂದು ಬ್ರಾಂಡ್ ಮಾಡುವುದು ಸೂಕ್ತವಲ್ಲ" ಎಂದು ನ್ಯಾಯಾಧೀಶರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com