ಉತ್ತರ ಪ್ರದೇಶ: ನಾಲೆಗೆ ಬಿದ್ದ ವ್ಯಾನ್, 7 ಮಕ್ಕಳ ದಾರುಣ ಸಾವು!

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವ್ಯಾನ್ ವೊಂದು ಆಯತಪ್ಪಿ ನಾಲೆಗೆ ಉರುಳಿದ ಪರಿಣಾಮ 7 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ.

Published: 20th June 2019 12:00 PM  |   Last Updated: 20th June 2019 12:18 PM   |  A+A-


7 kids feared drowned after van falls into canal in Lucknow

ನಾಲೆಗೆ ಬಿದ್ದ ವ್ಯಾನ್

Posted By : SVN SVN
Source : ANI
ಲಖನೌ: ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವ್ಯಾನ್ ವೊಂದು ಆಯತಪ್ಪಿ ನಾಲೆಗೆ ಉರುಳಿದ ಪರಿಣಾಮ 7 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ.

ಲಖನೌನ ನಗ್ರಾಮ್ ನಲ್ಲಿರುವ ನಾಲೆಯಲ್ಲಿ ಈ ದುರಂತ ಸಂಭವಿಸಿದ್ದು, ವ್ಯಾನ್ ನಲ್ಲಿ 29 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಪೊಲೀಸ್ ಮೂಲಗಳು ತಿಳಿಸಿರುವಂತೆ ಎಲ್ಲ ಪ್ರಯಾಣಿಕರೂ ಮದುವೆ ಸಮಾರಂಭ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರು ಎಂದು ತಿಳಿದುಬಂದಿದೆ. ಮುಂಜಾನೆ ಸುಮಾರು 3 ಗಂಟೆ ಸಂದರ್ಭದಲ್ಲಿ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ನಾಲೆಗೆ ಬಿದ್ದಿದೆ.

ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಎನ್ ಡಿಆರ್ ಎಫ್ ತಂಡ 22 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ 7 ಮಂದಿ ಮಕ್ಕಳು ಮಾತ್ರ ಪತ್ತೆಯಾಗಿಲ್ಲ. ನಾಪತ್ತೆಯಾದ ಮಕ್ಕಳ ಪತ್ತೆಗೆ ಮುಳುಗು ತಜ್ಞರನ್ನು ಕೂಡ ನಿಯೋಜಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಎಸ್ ಕೆ ಭಗತ್ ಅವರು, ನಾಲೆಯಲ್ಲಿ ನೀರಿನ ಹರಿವು ವೇಗವಾಗಿದ್ದು, ಇದೇ ಕಾರಣಕ್ಕೆ ಮಕ್ಕಳ ಪತ್ತೆ ಕಾರ್ಯಾಚರಣೆ ತಡವಾಗುತ್ತಿದೆ. ಆದರೂ ಮಕ್ಕಳ ಪತ್ತೆಗೆ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp