ಎನ್ಸಿಫಾಲಿಟಿಸ್ ಸೋಂಕು, ಸಾವಿನ ಸಂಖ್ಯೆ 117ಕ್ಕೆ ಏರಿಕೆ: ಚುನಾವಣೆಗೆ ಆದ್ಯತೆ, ಜಾಗೃತಿ ಅಭಿಯಾನ ಮರೆತ ಬಿಹಾರ?

ಬಿಹಾರದಲ್ಲಿ ಎನ್ಸಿಫಾಲಿಟಿಸ್ ಮಿದುಳು ಸೋಂಕಿನ ಮರಣ ಮೃದಂಗ ಮುಂದುವರೆದಿದ್ದು, ಈ ವರೆಗೂ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 117ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಾಟ್ನಾ: ಬಿಹಾರದಲ್ಲಿ ಎನ್ಸಿಫಾಲಿಟಿಸ್ ಮಿದುಳು ಸೋಂಕಿನ ಮರಣ ಮೃದಂಗ ಮುಂದುವರೆದಿದ್ದು, ಈ ವರೆಗೂ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 117ಕ್ಕೆ ಏರಿಕೆಯಾಗಿದೆ.
ಬಿಹಾರದ ಮುಜಾಫರ್ ನಗರದಲ್ಲಿ ಮಿದುಳು ಸೋಂಕು ಎನ್ಸಿಫಾಲಿಟಿಸ್ ಗೆ ಬಲಿಯಾದವರ ಸಂಖ್ಯೆ 117ಕ್ಕೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಕೃಷ್ಣ ವೈದ್ಯಕೀಯ ಕಾಲೇಜೊಂದರಲ್ಲೇ 98 ಮಂದಿ ಸಾವನ್ನಪ್ಪಿದ್ದು, ಕೇಜ್ರಿವಾಲ್ ಆಸ್ಪತ್ರೆಯಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ಪ್ರಸ್ತುತ ಸೋಂಕು ಪೀಡಿತ ಮುಜಾಫರ್ ಪುರ ನಗರಕ್ಕೆ ಬಿಹಾರ ಸರ್ಕಾರ ಹೆಚ್ಚುವರಿ ವೈದ್ಯರನ್ನು ನಿಯೋಜಿಸಿದ್ದು, ತುರ್ತು ಸಂದರ್ಭಗಳನ್ನು ಹೊರತು ಪಡಿಸಿ ವೈದ್ಯರಿಗೆ ಸಾಮಾನ್ಯ ರಜೆ ನೀಡದಂತೆ ಆದೇಶ ನೀಡಿದೆ. 
ಜಾಗೃತಿ ಅಭಿಯಾನವನ್ನೇ ಕೈ ಬಿಟ್ಟಿದ್ದ ಬಿಹಾರ ಸರ್ಕಾರ?
ಇನ್ನು ಕಳೆದ ಮೂರು ವರ್ಷಗಳಿಂದ ಬಿಹಾರ ಜನತೆಯನ್ನು ಕಾಡುತ್ತಿರುವ ಎನ್ಸಿಫಾಲಿಟೀಸ್ ಮಿದುಳು ಸೋಂಕಿನ ಕುರಿತಂತೆ ಬಿಹಾರ ಸರ್ಕಾರದ ನಿರ್ಲಕ್ಷ್ಯವೇ ಸಾವಿನ ಸಂಖ್ಯೆ ಏರಿಕೆಗೆ ಕಾರಣ ಎನ್ನಲಾಗತ್ತಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಕಾರ್ಯದಲ್ಲಿ ಬಿಸಿಯಾಗಿದ್ದ ಅಧಿಕಾರಿಗಳು ಮಿದುಳು ಸೋಂಕಿನ ಕುರಿತು ಸರ್ಕಾರ ಯೋಜಿಸಿದ್ದ ಜಾಗೃತಿ ಅಭಿಯಾನವನ್ನು ಸ್ಥಗಿತಗೊಳಿಸಿತ್ತು. ಪ್ರತೀ ವರ್ಷ ಮೇ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬಿಹಾರ ಸರ್ಕಾರ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಅಭಿಯಾನ ನಡೆಸುತ್ತಿತ್ತು. ಆ ಮೂಲಕ ಜನರಲ್ಲಿ ಮಿದುಳು ಸೋಂಕನ್ನು ನಿಯಂತ್ರಿಸುವ ಕುರಿತು ಮಾಹಿತಿ ನೀಡುತ್ತಿತ್ತು. ಆದರೆ ಈ ಬಾರಿ ಚುನಾವಣೆ ಹಿನ್ನಲೆಯಲ್ಲಿ ಜಾಗೃತಿ ಅಭಿಯಾನ ನಿರೀಕ್ಷಿತ ಮಟ್ಟದಲ್ಲಿ ನಡೆದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com