ಕೋಲ್ಕತಾ: ಸೇನಾ ತರಬೇತಿ ಕೇಂದ್ರದಲ್ಲೇ ಸಿಬ್ಬಂದಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ!

ಶಿಸ್ತಿಗೆ ಹೆಸರಾಗಿರುವ ಭಾರತೀಯ ಸೇನೆಯ ತರಬೇತಿ ಕ್ಯಾಂಪ್ ನಲ್ಲಿಯೇ ಸಿಬ್ಬಂದಿಯೋರ್ವ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ಕೋಲ್ಕತಾದಲ್ಲಿ ನಡೆದಿದೆ.

Published: 20th June 2019 12:00 PM  |   Last Updated: 20th June 2019 12:22 PM   |  A+A-


Girl Allegedly Raped Inside Army's Eastern Command In Kolkata: Sources

ಸಂಗ್ರಹ ಚಿತ್ರ

Posted By : SVN SVN
Source : PTI
ಕೋಲ್ಕತಾ: ಶಿಸ್ತಿಗೆ ಹೆಸರಾಗಿರುವ ಭಾರತೀಯ ಸೇನೆಯ ತರಬೇತಿ ಕ್ಯಾಂಪ್ ನಲ್ಲಿಯೇ ಸಿಬ್ಬಂದಿಯೋರ್ವ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ಕೋಲ್ಕತಾದಲ್ಲಿ ನಡೆದಿದೆ.

ಕೋಲ್ಕತಾದಲ್ಲಿರುವ ಭಾರತೀಯ ಸೇನೆಯ ಪೂರ್ವ ಕಮಾಂಡ್‌ ಕೇಂದ್ರ ಕಚೇರಿ ಇರುವ ಫೋರ್ಟ್ ವಿಲಿಯಂ ಒಳಗೆ 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದ್ದು, ಈ ಕುರಿತು ಸೇನೆಯ ಗ್ರೂಪ್‌ ಡಿ ಸಿಬ್ಬಂದಿಯಾಗಿದ್ದ ಆರೋಪಿ ಸಾಗರ್ ಮಲ್ಲಿಕ್ ವಿರುದ್ಧ ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಫೋರ್ಟ್‌ ವಿಲಿಯಂನಲ್ಲಿ ಓಲ್ಡ್‌ ಬಾಪು ಲೇನ್ ನಲ್ಲಿದ್ದ ಮನೆಯಲ್ಲಿ ಶನಿವಾರ ಸಂಜೆ ಮತ್ತೋರ್ವ ಸೇನಾ ಸಿಬ್ಬಂದಿಯ ಪುತ್ರಿಯು ಮನೆಯಲ್ಲಿ ಒಬ್ಬಳೇ ಇರುವ ವೇಳೆ ಆರೋಪಿಯು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ. ಅಂತೆಯೇ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಆರೋಪಿ ಸಾಗರ್ ಮಲ್ಲಿಕ್ ಫೋರ್ಟ್ ವಿಲಿಯಂಗೆ ಕೆಲ ದಿನಗಳ ಹಿಂದೆ ತನ್ನ ಸಹೋದರಿಯ ನೋಡಲು ಆಗಮಿಸಿದ್ದ. ಈ ವೇಳೆ ಆತ ಬಾಲಕಿಯನ್ನು ಗಮನಿಸಿದ್ದ. ಮನೆಯಲ್ಲಿ ಪೋಷಕರು ಇಲ್ಲದ ಸಮಯ ನೋಡಿಕೊಂಡು ಆತ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಆರೋಪಿ ಸಾಗರ್ ಮಲ್ಲಿಕ್ ವಿರುದ್ಧದ ಆರೋಪ ಸಾಬೀತಾದರೆ ಆತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಸಜೆ ಶಿಕ್ಷೆಯಾಗುವ ಸಾಧ್ಯತೆ ಇದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp