ವಿಚಾರಣೆಗೆ ವಿನಾಯಿತಿ ಕೋರಿ ಪ್ರಜ್ಞಾ ಠಾಕೂರ್ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

2008ರಲ್ಲಿ ನಡೆದಿದ್ದ ಮಾಲೆಗಾಂವ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಕ್ಕೆ ಒಂದು ಬಾರಿ ವಿಚಾರಣೆಗೆ ಹಾಜರಿಯಿಂದ ವಿನಾಯಿತಿ ಕೋರಿ ಭೂಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸಲ್ಲಿಸಿದ್ದ ಅರ್ಜಿಯನ್ನು ಎನ್ ಐಎ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಪ್ರಜ್ಞಾ  ಠಾಕೂರ್
ಪ್ರಜ್ಞಾ ಠಾಕೂರ್
ಮುಂಬೈ: 2008ರಲ್ಲಿ ನಡೆದಿದ್ದ ಮಾಲೆಗಾಂವ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಕ್ಕೆ ಒಂದು ಬಾರಿ ವಿಚಾರಣೆಗೆ  ಹಾಜರಿಯಿಂದ ವಿನಾಯಿತಿ ಕೋರಿ ಭೂಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸಲ್ಲಿಸಿದ್ದ ಅರ್ಜಿಯನ್ನು  ಎನ್ ಐಎ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. 
ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್, ಅನಾರೋಗ್ಯ, ದೂರ, ಭದ್ರತೆ ಹಾಗೂ ಕಲಾಪಕ್ಕೆ ಹಾಜರಾತಿಯ ಕಾರಣ ನೀಡಿ ಒಂದು ವಾರಗಳ ಕಾಲ ವಿಚಾರಣೆಯಿಂದ ವಿನಾಯಿತಿ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.  ಆದಾಗ್ಯೂ, ಇಂದು ಒಂದು ದಿನ ವಿಚಾರಣೆಯಿಂದ ವಿನಾಯಿತಿಯನ್ನು ನೀಡಲಾಗಿದೆ.
ಕಲಾಪಕ್ಕೆ ಹಾಜರಾಗುವಂತೆ ಬಿಜೆಪಿ ಪಕ್ಷ ಠಾಕೂರ್ ಗೆ ನೋಟಿಸ್ ನೀಡಿದೆ. ಪಕ್ಷಕ್ಕೆ ಬದ್ದಳಾಗಿ ಸಂಸತ್ ಕಲಾಪಕ್ಕೆ ಹಾಜರಾಗುವುದು ಅಗತ್ಯ . ಆದಾಗ್ಯೂ, ಈ ಸಂಬಂಧ ಯಾವುದೇ ಪ್ರತಿಯನ್ನು ಒದಗಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದು ಠಾಕೂರ್ ಪರ ವಕೀಲರು ಹೇಳಿದ್ದಾರೆ.
ಶನಿವಾರ ವಿಚಾರಣೆಯಿಂದ ವಿನಾಯಿತಿ ಕೋರಿ ಠಾಕೂರ್ ಕಳೆದ ವಾರ  ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಅನುಮೋದಿಸಿತ್ತು. ವಾರಕ್ಕೆ ಒಂದು ಬಾರಿಯಾದರೂ ಎಲ್ಲಾ ಆರೋಪಿಗಳು ವಿಚಾರಣೆಗೆ ಹಾಜರಾಗುವಂತೆ ಕಳೆದ ತಿಂಗಳು ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com