ಎಐಸಿಸಿಗೆ ಉತ್ತರಾಧಿಕಾರಿ ಯಾರು ಅಂತ ಪಕ್ಷ ನಿರ್ಧರಿಸುತ್ತೆ, ನಾನಲ್ಲ: ರಾಹುಲ್ ಗಾಂಧಿ

ತಮ್ಮ ರಾಜೀನಾಮೆ ನಿರ್ಧಾರಕ್ಕೆ ಬಲವಾಗಿ ಅಂಟಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ನನ್ನ ಮುಂದಿನ ಉತ್ತರಾಧಿಕಾರಿ ಯಾರು...

Published: 20th June 2019 12:00 PM  |   Last Updated: 20th June 2019 03:27 AM   |  A+A-


Rahul Gandhi says party, not him, will decide on his successor

ರಾಹುಲ್ ಗಾಂಧಿ

Posted By : LSB LSB
Source : PTI
ನವದೆಹಲಿ: ತಮ್ಮ ರಾಜೀನಾಮೆ ನಿರ್ಧಾರಕ್ಕೆ ಬಲವಾಗಿ ಅಂಟಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ನನ್ನ ಮುಂದಿನ ಉತ್ತರಾಧಿಕಾರಿ ಯಾರು ಅಂತ ಪಕ್ಷ ನಿರ್ಧರಿಸುತ್ತೆ, ನಾನಲ್ಲ ಎಂದು ಗುರುವಾರ ಹೇಳಿದ್ದಾರೆ.

ಹೊಸ ಕಾಂಗ್ರೆಸ್ ಅಧ್ಯಕ್ಷರಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಗೆ ಉತ್ತರಾಧಿಕಾರಿ ಯಾರು ಅಂತ ನಿರ್ಧರಿಸುವ ವ್ಯಕ್ತಿ ನಾನಲ್ಲ. ಆ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಾಹುಲ್ ರಾಜೀನಾಮೆಯನ್ನು ತಿರಸ್ಕರಿಸಿದೆ ಮತ್ತು ಎಲ್ಲಾ ಹಂತಗಳಲ್ಲೂ ಪಕ್ಷವನ್ನು ಪುನರ್ ರಚಿಸುವಂತೆ ಹೇಳಿದೆ.

ಇದೇ ವೇಳೆ ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಆ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp