ಲೋಕಸಭೆಯಲ್ಲಿ ಮತ್ತೆ ತ್ರಿವಳಿ ತಲಾಖ್ ಮಸೂದೆ ಮಂಡನೆ: 'ಅನ್ಯಾಯ' ಎಂದ ಪ್ರತಿಪಕ್ಷಗಳು!

ನಿರೀಕ್ಷೆಯಂತೆಯೇ ಇಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಲಾಗಿದ್ದು, ಸರ್ಕಾರದ ತಿದ್ದುಪಡಿ ಮಸೂದೆಗೆ ಮತ್ತೆ ವಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ.

Published: 21st June 2019 12:00 PM  |   Last Updated: 21st June 2019 04:14 AM   |  A+A-


Fresh triple talaq 2019 bill introduced in Lok Sabha amidst uproar

ಲೋಕಸಭೆ

Posted By : SVN SVN
Source : PTI
ನವದೆಹಲಿ: ನಿರೀಕ್ಷೆಯಂತೆಯೇ ಇಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಲಾಗಿದ್ದು, ಸರ್ಕಾರದ ತಿದ್ದುಪಡಿ ಮಸೂದೆಗೆ ಮತ್ತೆ ವಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಇಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್ 2019 ಮಸೂದೆಯನ್ನು ಮಂಡಿಸಿದರು. ಈ ವೇಳೆ ಪ್ರಜೆಗಳು ತಮಗಾಗುತ್ತಿರುವ ಸಮಸ್ಯೆಗಳ ವಿರುದ್ಧ ಕಾನೂನು ರಚನೆ ಮಾಡಲು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಕಾನೂನು ರಚಿಸುವುದು ನಮ್ಮ ಕರ್ತವ್ಯ. ತ್ರಿವಳಿ ತಲಾಖ್ ಕಾನೂನು ಅದರ ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡುತ್ತದೆ ಎಂದು ಹೇಳಿದರು.

ಇನ್ನು ಕೇಂದ್ರ ಸರ್ಕಾರದ ಈ ತಿದ್ದುಪಡಿ ವಿಧೇಯಕಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ತ್ರಿವಳಿ ತಲಾಖ್ ಮೂಲಕ ಎನ್ ಡಿಎ ಸರ್ಕಾರ ಜನತೆಗೆ ಅನ್ಯಾಯ ಮಾಡುತ್ತಿದ್ದು, ತಲಾಖ್ ನೀಡಿದ ಪತಿಗೆ ಜೈಲು ಶಿಕ್ಷೆ ವಿಧಿಸುವುದು ಅನ್ಯಾಯ, ಈ ನಿಯಮವನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿವೆ. ಇದೇ ವಿಚಾರವಾಗಿ ಲೋಕಸಭೆಯಲ್ಲಿ ವ್ಯಾಪಕ ಚರ್ಚೆಗಳಾಗುತ್ತಿದ್ದು, ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಘೋಷಣೆ ಕೂಗುತ್ತಿವೆ. 

ಕಳೆದ ಎನ್‌ಡಿಎ ಸರಕಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಿ, ಕಾನೂನಾಗಿ ರೂಪಿಸಲು ಸಾಧ್ಯವಾಗದೇ ಇರುವ ತ್ರಿವಳಿ ತಲಾಖ್‌ ಸೇರಿದಂತೆ ಒಟ್ಟು 10 ಸುಗ್ರೀವಾಜ್ಞೆಗಳನ್ನು ಗುರುವಾರ ಸರ್ಕಾರ ಮತ್ತೆ ಮಂಡಿಸಿದೆ. ಪ್ರಮುಖವಾಗಿ ಮಹಿಳೆಯರ ಮದುವೆ ಹಕ್ಕು ಮತ್ತು ರಕ್ಷಣೆ ಕಾಯ್ದೆ 2019 ಸೇರಿದಂತೆ ಉಳಿದ ಹೊಸ ಮಸೂದೆಗಳು ಇಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಇನ್ನು ಸುಗ್ರೀವಾಜ್ಞೆ ಹೊರಡಿಸಿದ 45 ದಿನಗಳಲ್ಲಿ ಕಾಯ್ದೆ ಕಾನೂನಾಗಿ ಮಾರ್ಪಡಬೇಕು. ಆದರೆ, ರಾಜ್ಯಸಭೆಯಲ್ಲಿ ಎನ್ ಡಿಎ ಸರ್ಕಾರಕ್ಕೆ ಬಹುಮತ ಇಲ್ಲದ ಕಾರಣ ಭಾರತೀಯ ವೈದ್ಯಕೀಯ ಮಂಡಳಿ, ಕಂಪನಿಗಳ ಸುಗ್ರೀವಾಜ್ಞೆ, ಜಮ್ಮು-ಕಾಶ್ಮೀರ ಮೀಸಲಾತಿ, ಆಧಾರ್‌, ವಿಶೇಷ ಆರ್ಥಿಕ ವಲಯ, ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ಸೇರಿ ಕೆಲವು ಮಸೂದೆಗಳು ಒಪ್ಪಿಗೆ ಪಡೆಯಲು ಸಾಧ್ಯವಾಗಿರಲಿಲ್ಲ. 

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತ್ರಿವಳಿ ತಲಾಖ್‌, ಆಧಾರ್‌ ಸೇರಿದಂತೆ 10 ಸುಗ್ರಿವಾಜ್ಞೆಗಳನ್ನು ಹೊಸ ಮಸೂದೆಗಳಾಗಿ ಮಂಡಿಸಿ ಸಂಸತ್ತಿನಲ್ಲಿ ಮಂಡಿಸಲು ಒಪ್ಪಿಗೆ ಪಡೆಯಲಾಗಿತ್ತು.  ಕಲಾಪ ಆರಂಭವಾದ 45 ದಿನಗಳ ಒಳಗಾಗಿ ಈ ಎಲ್ಲ ಸುಗ್ರೀವಾಜ್ಞೆಗಳನ್ನು ಕಾನೂನಾಗಿ ರೂಪಿಸಬೇಕು. ಇಲ್ಲದಿದ್ದರೆ, ಈ ಎಲ್ಲ ಸುಗ್ರೀವಾಜ್ಞೆಗಳು ತಾವಾಗಿಯೇ ರದ್ದಾಗಲಿವೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp