ಗ್ರಾಮೀಣ ಪ್ರದೇಶಗಳಿಗೆ 'ಯೋಗ' ತಲುಪಿಸುವ ಸಮಯವಿದು: ಪ್ರಧಾನಿ ನರೇಂದ್ರ ಮೋದಿ

ಯೋಗವನ್ನು ಗ್ರಾಮೀಣ ಪ್ರದೇಶಕ್ಕೆ ಪರಿಚಯಿಸಬೇಕಾದ ಸಮಯವಿದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Published: 21st June 2019 12:00 PM  |   Last Updated: 21st June 2019 12:10 PM   |  A+A-


PM Narendra Modi doing Yoga in Ranchi

ರಾಂಚಿಯಲ್ಲಿ ಯೋಗ ನಿರತ ಪ್ರಧಾನಿ ನರೇಂದ್ರ ಮೋದಿ

Posted By : SUD SUD
Source : The New Indian Express
ರಾಂಚಿ: ಯೋಗವನ್ನು ಗ್ರಾಮೀಣ ಪ್ರದೇಶಕ್ಕೆ ಪರಿಚಯಿಸಬೇಕಾದ ಸಮಯವಿದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಶುಕ್ರವಾರ 5ನೇ ಅಂತಾರಾಷ್ಟ್ರೀಯ ಯೋಗ ದಿನ. ಈ ಹಿನ್ನಲೆಯಲ್ಲಿ ಜಾರ್ಖಂಡ್ ರಾಜಧಾನಿ ರಾಂಚಿಯ ಪ್ರಭಾತ್ ತಾರಾ ಮೈದಾನದಲ್ಲಿ ಯೋಗಾಭ್ಯಾಸ ಮಾಡಿದ ಬಳಿಕ ಅವರು ಮಾತನಾಡಿದರು.

ಇಂದು ನಾನು ಆಧುನಿಕ ಯೋಗದ ಪ್ರಯಾಣವನ್ನು ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಪರಿಚಯಿಸಬೇಕಿದೆ. ಬಡವರು, ಆದಿವಾಸಿಗಳ ಜೀವನದಲ್ಲಿ ಯೋಗ ಒಂದು ಭಾಗವಾಗಬೇಕು. ಆನಾರೋಗ್ಯ, ಬಡತನವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಹಾಗಾಗಿ ಯೋಗ ಜನರ ಜೀವನವನ್ನು ಬದಲಿಸುತ್ತದೆ. ಆರೋಗ್ಯ ವೃದ್ಧಿಗೆ ಕೇವಲ ಔಷಧೋಪಚಾರಗಳು ಸಾಕಾಗುವುದಿಲ್ಲ. ಯೋಗದಿಂದ ಮಾತ್ರ ಆರೋಗ್ಯ ಎಂದು ಪ್ರತಿಪಾದಿಸಿದರು.
 
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಭಾರತ ಸೇರಿದಂತೆ ವಿಶ್ವದ ಜನರಿಗೆ ಶುಭಾಶಯ ಕೋರಿದ ಪ್ರಧಾನಿ, ಇಂದು ವಿಶ್ವದ ಅನೇಕ ಭಾಗಗಳಲ್ಲಿ ಜನರು ಯೋಗ ಮಾಡುತ್ತಿದ್ದಾರೆ. ಯೋಗವನ್ನು ಪ್ರಚಾರ ಮಾಡುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದರು.

ಇಂದು ಬದಲಾದ ಕಾಲಘಟ್ಟದಲ್ಲಿ ನಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕಾದ ಅಗತ್ಯವಿದೆ. ಯೋಗದಿಂದ ಸದೃಢ ಮಾನಸಿಕ ಮತ್ತು ದೈಹಿಕ ಆರೋಗ್ಯ ಹೊಂದಲು ಸಾಧ್ಯ. ಅದು ಯೋಗ ಮತ್ತು ಭಾರತದ ತತ್ವಶಾಸ್ತ್ರದ ಶಕ್ತಿಯಾಗಿದೆ ಎಂದರು.

ಯೋಗ ನಮ್ಮ ಸಂಸ್ಕೃತಿಯ ಪ್ರಮುಖ ಭಾಗ.ಇಂದು ಯೋಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕಿದೆ. ಯೋಗ ದಿನಾಚರಣೆಯ ಇಂದು ಹಲವರು ಯೋಗಾಭ್ಯಾಸದ ಮೂಲಕ ಸೂರ್ಯ ದೇವರನ್ನು ಸ್ವಾಗತಿಸಿದ್ದಾರೆ. ಇದನ್ನು ನೋಡಲು ನಿಜಕ್ಕೂ ಖುಷಿಯಾಗುತ್ತದೆ. ಎಲ್ಲರೂ ಯೋಗಭ್ಯಾಸವನ್ನು ಮಾಡುವ ಮೂಲಕ ತಮ್ಮ ದಿನನಿತ್ಯದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದರು. 

ಕಾರ್ಯಕ್ರಮದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ರಘುವೀರ್ ದಾಸ್ ಮತ್ತು ಹಲವು ಸಚಿವರುಗಳು ಭಾಗವಹಿಸಿದ್ದರು. ಸುಮಾರು 30 ಸಾವಿರ ಜನ ಪ್ರಧಾನ ಮಂತ್ರಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇಂದು ಕರ್ನಾಟಕ ಸೇರಿದಂತೆ ಪ್ರತಿ ರಾಜ್ಯ ಸರ್ಕಾರಗಳೂ ಸಹ ಯೋಗ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸುತ್ತಿದ್ದು, ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಯೋಗ ದಿನಾಚರಣೆ ಕಳೆಗಟ್ಟಿದೆ. ಅಲ್ಲದೆ ದೇಶದ ಶಾಲೆ-ಕಾಲೇಜುಗಳಲ್ಲೂ ಸಹ ಯೋಗ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸಲಾಗುತ್ತಿದೆ.

ಯೋಗ ನಮ್ಮ ಸಂಸ್ಕೃತಿಯ ಪ್ರಮುಖ ಭಾಗ.ಇಂದು ಯೋಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕಿದೆ. ಯೋಗ ದಿನಾಚರಣೆಯ ಇಂದು ಹಲವರು ಯೋಗಾಭ್ಯಾಸದ ಮೂಲಕ ಸೂರ್ಯ ದೇವರನ್ನು ಸ್ವಾಗತಿಸಿದ್ದಾರೆ. ಇದನ್ನು ನೋಡಲು ನಿಜಕ್ಕೂ ಖುಷಿಯಾಗುತ್ತದೆ. ಎಲ್ಲರೂ ಯೋಗಭ್ಯಾಸವನ್ನು ಮಾಡುವ ಮೂಲಕ ತಮ್ಮ ದಿನನಿತ್ಯದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದರು. 

ಯೋಗ ಗುರು ಬಾಬಾ ರಾಮ್ ದೇವ್ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆಗೆ ನಾಂಡೆಡ್ ನಲ್ಲಿ ಯೋಗಾಭ್ಯಾಸ ಮಾಡಿದರು. ರಾಮದೇವ್ ಅವರ ಪತಂಜಲಿ ಸಂಸ್ಥೆ ದೇಶಾದ್ಯಂತ ಸುಮಾರು 1 ಲಕ್ಷ ಗ್ರಾಮಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಯೋಗ ಎಂಬ ಶಬ್ದವು ಸಂಸ್ಕೃತದ ಯಜ್ ಎಂಬ ಶಬ್ದದಿಂದ ಹುಟ್ಟಿಕೊಂಡಿದ್ದು ಅದರರ್ಥ ಸೇರಿಕೊಳ್ಳುವುದು, ಒಂದಾಗುವುದು ಎಂದು. ಯೋಗ ಸಂಪೂರ್ಣವಾಗಿ ವೈಜ್ಞಾನಿಕ ವಿಧಾನವಾಗಿದ್ದು ದೇಹ ಮತ್ತು ಮನಸ್ಸಿನ ನಡುವೆ ಸಾಮರಸ್ಯವನ್ನು ತರಲು ನೋಡುತ್ತದೆ. ದೇಹ, ಮನಸ್ಸು, ಭಾವನೆ ಮತ್ತು ದೇಹದ ಶಕ್ತಿ ಮೇಲೆ ಯೋಗ ಪರಿಣಾಮ ಬೀರುತ್ತದೆ. 

2015ರ ಜೂನ್ 21ರಂದು ಮೊದಲ ಬಾರಿಗೆ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಅಂತಾರಾಷ್ಟ್ರೀಯ ಯೋಗ ದಿನವನ್ನು ಮೊದಲ ಬಾರಿಗೆ ಪ್ರಧಾನಿ ಮೋದಿಯವರು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ 2014ರ ಸೆಪ್ಟೆಂಬರ್ 27ರಂದು ಪ್ರಸ್ತಾಪಿಸಿದ್ದರು. ಅದನ್ನು ವಿಶ್ವಸಂಸ್ಥೆ ಒಪ್ಪಿಕೊಂಡು ಮರುವರ್ಷದಿಂದ ಅಂತಾರಾಷ್ಟ್ರೀಯ ಯೋಗ ದಿನವೆಂದು ಜೂನ್ 21ರಂದು ಘೋಷಿಸಿತು. 

ರಾಷ್ಟ್ರಪತಿ ಅವರಿಂದ ಅಂತಾರಾಷ್ಟ್ರೀಯ ಯೋಗದ ದಿನದ ಶುಭಾಶಯ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯ ಕೋರಿದ್ದಾರೆ. ಯೋಗದಲ್ಲಿ ಪಾಲ್ಗೊಳ್ಳುವ ವಿಶ್ವದ ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ಯೋಗವು ಮಾನವೀಯತೆಗೆ ಭಾರತದ ಕೊಡುಗೆಯಾಗಿದೆ; ಆರೋಗ್ಯಕರ ಜೀವನಕ್ಕೆ ಯೋಗ ಪ್ರಮುಖ ಕೀಲಿಕೈಯಾಗಿದೆ. ಯೋಗ ಆಚರಣೆಯ ಒಂದು ಭಾಗವಾಗಬೇಕು ಎಂದು ರಾಷ್ಟ್ರಪತಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp