ಭೂಪಾಲ್: ಭದ್ರತಾ ವೈಫಲ್ಯ, ಜೈಲು ಗೋಡೆ ಹಾರಿ ನಾಲ್ಕು ಕೈದಿಗಳು ಪರಾರಿ

ಭದ್ರತಾ ವೈಫಲ್ಯದಿಂದಾಗಿ ಮಧ್ಯಪ್ರದೇಶದ ನೀಮುಚ್‌ ಜಿಲ್ಲೆಯ ಕಾರಾಗೃಹದಿಂದ ನಾಲ್ವರು ಕೈದಿಗಳು ಪರಾರಿಯಾದ ಘಟನೆ ಭಾನುವಾರ ನಸುಕಿನ ವೇಳೆ ....

Published: 23rd June 2019 12:00 PM  |   Last Updated: 23rd June 2019 02:30 AM   |  A+A-


Four prisoners flee from Jail

ಪರಾರಿಯಾದ ಕೈದಿಗಳು

Posted By : SD SD
Source : The New Indian Express
ಭೂಪಾಲ್:  ಭದ್ರತಾ ವೈಫಲ್ಯದಿಂದಾಗಿ ಮಧ್ಯಪ್ರದೇಶದ ನೀಮುಚ್‌ ಜಿಲ್ಲೆಯ ಕಾರಾಗೃಹದಿಂದ ನಾಲ್ವರು ಕೈದಿಗಳು ಪರಾರಿಯಾದ ಘಟನೆ ಭಾನುವಾರ ನಸುಕಿನ ವೇಳೆ ನಡೆದಿದೆ.

ಜೈಲರ್‌ ಮತ್ತು ಸಿಬ್ಬಂದಿಗಳಿಗೆ ತಿಳಿಯದಂತೆ ಜೈಲಿನ ಸರಳುಗಳನ್ನು ಕತ್ತರಿಸಿ ಹಗ್ಗವನ್ನು ಬಳಸಿಕೊಂಡು ಜೈಲಿನ ಗೋಡೆಗಳನ್ನು ಏರಿ ಪರಾರಿಯಾಗಿದ್ದಾರೆ.

ಪರಾರಿಯಾದ ಕೈದಿಗಳು ನರ್‌ಸಿಂಗ್‌ (20), ದುಬೆಲಾಲ್‌ (19), ಪಂಕಜ್‌(20), ಲೇಖ್‌ ರಾಮ್‌ (29) ಎನ್ನುವವರಾಗಿದ್ದಾರೆ.

ನಾಲ್ವರ ಪೈಕಿ ಓರ್ವ ಕೊಲೆಕೇಸ್‌ನಲ್ಲಿ ಶಿಕ್ಷೆಗೊಳಗಾಗಿದ್ದು,ಇನ್ನೋರ್ವ ರೇಪ್‌ ಕೇಸ್‌ನಲ್ಲಿ ಶಿಕ್ಷೆಗೊಳಗಾದವನು, ಇನ್ನಿಬ್ಬರು ಡ್ರಗ್ಸ್‌ ಜಾಲದಲ್ಲಿ ಸಿಕ್ಕಿ ಬಿದ್ದವರು.

ಘಟನೆ ನಡೆದ ಬೆನ್ನಲ್ಲೆ ಮೂವರು ಪೊಲೀಸ್‌ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಲಾಗಿದೆ.
ಪರಾರಿಯಾದ ಕೈದಿಗಳ ಸುಳಿವು ನೀಡಿದವರಿಗೆ ತಲಾ 50 ಸಾವಿರ ಬಹುಮಾನವನ್ನು ಸರ್ಕಾರ ಘೋಷಿಸಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp