ಭಾರತ-ಅಫ್ಘಾನಿಸ್ಥಾನ ಪಂದ್ಯ: ಮೊಹಮ್ಮದ್ ಶಮಿ ಹ್ಯಾಟ್ರಿಕ್ ಹಿಂದಿನ ಮಾಸ್ಟರ್ ಬ್ರೈನ್ ಯಾರು ಗೊತ್ತೇ?

ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವಿನ ವಿಶ್ವಾಸವನ್ನು ಕಳೆದುಕೊಂಡಿತ್ತು. ಆದರೆ ಮೊಹಮ್ಮದ್ ಶಮಿ ಅವರ ಸೆನ್ಷೇನಲ್ ಹ್ಯಾಟ್ರಿಕ್ ವಿಕೆಟ್ ನಿಂದಾಗಿ ಪಂದ್ಯದ ದಿಕ್ಕೇ ಬದಲಾಗಿ ಭಾರತ ಜಯಗಳಿಸಿತ್ತು.

Published: 23rd June 2019 12:00 PM  |   Last Updated: 23rd June 2019 09:32 AM   |  A+A-

Mahi bhai told me to bowl yorkers: Mohammad Shami on sensational hat-trick against Afghanistan

ಭಾರತ-ಅಫ್ಘಾನಿಸ್ಥಾನ ಪಂದ್ಯ: ಮೊಹಮ್ಮದ್ ಶಮಿ ಹ್ಯಾಟ್ರಿಕ್ ಹಿಂದಿನ ಮಾಸ್ಟರ್ ಬ್ರೈನ್ ಯಾರು ಗೊತ್ತೇ?

Posted By : SBV SBV
Source : PTI
ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವಿನ ವಿಶ್ವಾಸವನ್ನು ಕಳೆದುಕೊಂಡಿತ್ತು. ಆದರೆ ಮೊಹಮ್ಮದ್ ಶಮಿ ಅವರ ಸೆನ್ಷೇನಲ್ ಹ್ಯಾಟ್ರಿಕ್ ವಿಕೆಟ್ ನಿಂದಾಗಿ ಪಂದ್ಯದ ದಿಕ್ಕೇ ಬದಲಾಗಿ ಭಾರತ ಜಯಗಳಿಸಿತ್ತು. 

ಈಗ ಈ ಹ್ಯಾಟ್ರಿಕ್ ವಿಕೆಟ್ ಹಿಂದಿನ ಮಾಸ್ಟರ್ ಬ್ರೈನ್ ಯಾರದ್ದು ಎಂಬುದನ್ನು ಸ್ವತಃ ಮೊಹಮ್ಮದ್ ಶಮಿ ಅವರೇ ಬಹಿರಂಗಪಡಿಸಿದ್ದಾರೆ. ತಾವು ಹ್ಯಾಟ್ರಿಕ್ ವಿಕೆಟ್ ಪಡೆಯುವುದಕ್ಕೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರೇ ಕಾರಣ ಎಂಬುದನ್ನು ಶಮಿ ತಿಳಿಸಿದ್ದಾರೆ. 

3 ವಿಕೆಟ್ ಗಳನ್ನು ಉಳಿಸಿಕೊಂಡಿದ್ದ ಅಫ್ಘಾನಿಸ್ಥಾನ ತಂಡಕ್ಕೆ ಕೊನೆಯ ಓವರ್ ನಲ್ಲಿ ಬೇಕಾಗಿದ್ದದ್ದು 16 ರನ್ ಗಳು ಈ ವೇಳೆ ತಮ್ಮ ಎಂದಿನ ಚಾಣಾಕ್ಷ ಸಲಹೆಯನ್ನು ಮಹೇಂದ್ರ ಸಿಂಗ್ ಧೋನಿ ಮೊಹಮ್ಮದ್ ಶಮಿಗೆ ನೀಡಿದ್ದರ ಫಲವಾಗಿ ಶಮಿ ಹ್ಯಾಟ್ರಿಕ್ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ನಿರ್ಣಾಯಕ ಹಂತದಲ್ಲಿ ನನಗೆ ಯಾರ್ಕರ್ ಎಸೆಯುವಂತೆ ಮಹೇಂದ್ರ ಸಿಂಗ್ ಧೋನಿ ನನಗೆ ಸಲಹೆ ನೀಡಿದ್ದರು ಆದ್ದರಿಂದಲೇ ಹ್ಯಾಟ್ರಿಕ್ ಸಾಧನೆ ಸಾಧ್ಯವಾಯಿತು ಎಂದು ಶಮಿ ಹೇಳಿದ್ದಾರೆ. 
Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?

Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp