ಜಾರ್ಖಂಡ್ : ಕಳ್ಳತನದ ಶಂಕೆ ಮೇಲೆ ಮುಸ್ಲಿಂ ಯುವಕನಿಗೆ ಥಳಿತ, ಜೈ ಶ್ರೀರಾಮ್ ಮಂತ್ರ ಪಠಿಸಲು ಒತ್ತಾಯ

ಕಳ್ಳತನದ ಶಂಕೆ ಮೇಲೆ ಮುಸ್ಲಿಂ ಯುವಕನೋರ್ವನಿಗೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಾರ್ಖಂಡ್ ರಾಜ್ಯದ ಖಾರ್ಸಾವಾನ್ ಜಿಲ್ಲೆಯಲ್ಲಿ ನಡೆದಿದೆ.

Published: 24th June 2019 12:00 PM  |   Last Updated: 24th June 2019 12:56 PM   |  A+A-


Muslim Man

ಮುಸ್ಲಿಂ ಯುವಕ

Posted By : ABN ABN
Source : Online Desk
ಜಾರ್ಖಂಡ್ : ಕಳ್ಳತನದ ಶಂಕೆ ಮೇಲೆ ಮುಸ್ಲಿಂ ಯುವಕನೋರ್ವನಿಗೆ   ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಾರ್ಖಂಡ್ ರಾಜ್ಯದ ಖಾರ್ಸಾವಾನ್ ಜಿಲ್ಲೆಯಲ್ಲಿ ನಡೆದಿದೆ. ಜೂನ್ 18 ರಂದು ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಂತ್ರಸ್ತನನ್ನು 24 ವರ್ಷದ ತಬ್ರೇಜ್ ಹನ್ಸಾರಿ ಎಂದು ಗುರುತಿಸಲಾಗಿದೆ. ಸುಮಾರು 18 ಗಂಟೆಗಳ ಕಾಲ ಮರಕ್ಕೆ ಕಟ್ಟಿ ಹಾಕಿ ಥಳಿಸಲಾಗಿದ್ದು, ನಂತರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಜೂನ್ 22 ರಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ  ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ವಿಡಿಯೋದಲ್ಲಿ ತಬ್ರೇಜ್ ಗೆ ಮರದ ತುಂಡಿನಿಂದ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಮತ್ತೊಂದು ವಿಡಿಯೋದಲ್ಲಿ ಜೈ ರಾಮ್, ಜೈ ಹನುಮನ್ ಅಂತ ಹೇಳುವಂತೆ ಒತ್ತಾಯಿಸಲಾಗಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp