ಸುಸ್ತಿದಾರರ ಪಟ್ಟಿಯಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹೆಸರು!: ಇಲ್ಲಿದೆ ವಿವರ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಬಂಗಲೆಯ ಹೆಸರನ್ನು ಮುಂಬೈ ಮಹಾನಗರ ಪಾಲಿಕೆ ಸುಸ್ತಿದಾರರ ಪಟ್ಟಿಗೆ ಸೇರ್ಪಡೆಗೊಳಿಸಿದೆ.
ಸುಸ್ತಿದಾರರ ಪಟ್ಟಿಯಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹೆಸರು!: ಇಲ್ಲಿದೆ ವಿವರ
ಸುಸ್ತಿದಾರರ ಪಟ್ಟಿಯಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹೆಸರು!: ಇಲ್ಲಿದೆ ವಿವರ
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಬಂಗಲೆಯ ಹೆಸರನ್ನು ಮುಂಬೈ ಮಹಾನಗರ ಪಾಲಿಕೆ ಸುಸ್ತಿದಾರರ ಪಟ್ಟಿಗೆ ಸೇರ್ಪಡೆಗೊಳಿಸಿದೆ. 
ಮಲ್ಬಾರ್ ಹಿಲ್ ಪ್ರದೇಶದಲ್ಲಿರುವ ಫಡ್ನವೀಸ್ ಅವರ ಬಂಗಲೆ ’ವರ್ಷ’ ಸುಸ್ತಿದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ’ವರ್ಷ’ ಮುಖ್ಯಮಂತ್ರಿಗಳ ಅಧಿಕೃತ ಬಂಗಲೆಯಾಗಿದ್ದು, 7,44,981 ರೂಪಾಯಿ ಮೊತ್ತದ ನೀರಿನ ಬಿಲ್ ಬಾಕಿ ಪಾವತಿ ಮಾಡದೇ ಇರುವ ಹಿನ್ನೆಲೆಯಲ್ಲಿ ಮುಂಬೈ ಮಹಾನಗರ ಪಾಲಿಕೆ ಈ ಕ್ರಮ ತೆಗೆದುಕೊಂಡಿದೆ. 
ಆರ್ ಟಿಐ ಮೂಲಕ ಈ ಮಾಹಿತಿ ಬಹಿರಂಗವಾಗಿದ್ದು, ದೇವೇಂದ್ರ ಫಡ್ನವೀಸ್ ಅವರಷ್ಟೇ ಅಲ್ಲದೇ ಸುಧೀರ್ ಮುಂಗಂತಿವಾರ್, ಪಂಕಜಾ ಮುಂಡೆ, ರಾಮ್ ದಾಸ್ ಕದಮ್ ಅವರ ಹೆಸರನ್ನೂ ನೀರಿನ ಬಿಲ್ ಪಾವತಿ ಮಾಡದೇ ಇರುವುದಕ್ಕಾಗಿ ಸುಸ್ತಿದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ.
2001 ರಿಂದ ಈ ಬಿಲ್ ಪಾವತಿ ಬಾಕಿ ಇದ್ದು, ನೀರಿನ ಬಿಲ್ ಪಾವತಿ ಮಾಡದ ಸಚಿವರು, ಮುಖ್ಯಮಂತ್ರಿಗಳ ವಿರುದ್ಧ ಬಿಎಂಸಿ ಯಾವುದೇ ಕ್ರಮ ಕೈಗೊಂಡಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com