ರಾಹುಲ್, ಸೋನಿಯಾರನ್ನು ಜೈಲಿಗೆ ಕಳುಹಿಸಲು ನಿಮ್ಮಿಂದ ಸಾಧ್ಯವಾಯಿತೇ?: ಬಿಜೆಪಿಗೆ ಅಧಿರ್ ರಂಜನ್ ಪ್ರಶ್ನೆ

ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಲೋಕಸಭೆಯ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಅವರು, 2ಜಿ ಮತ್ತು ಕಲ್ಲಿದ್ದಲು...
ಅಧಿರ್ ರಂಜನ್ ಚೌಧರಿ
ಅಧಿರ್ ರಂಜನ್ ಚೌಧರಿ
ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಲೋಕಸಭೆಯ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಅವರು, 2ಜಿ ಮತ್ತು ಕಲ್ಲಿದ್ದಲು ಹಗರಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು 'ಕಳ್ಳರು' ಎಂದು ಕರೆಯುವ ನಿಮ್ಮಿಂದ ಅವರನ್ನು ಜೈಲಿಗೆ ಕಳುಹಿಸಲು ಸಾಧ್ಯವಾಯಿತೇ? ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ 2ಜಿ ಹಗರಣ ಮತ್ತು ಕಲ್ಲಿದ್ದಲು ಹಗರಣದಲ್ಲಿ ಒಬ್ಬರಿಗಾದರೂ ಹಿಡಿಯಲು ನಿಮ್ಮಿಂದ ಸಾಧ್ಯವಾಯಿತೇ? ನೀವು ಚುನಾವಣಾ ಪ್ರಚಾರದಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿಯನ್ನು ಚೋರ್ ಎಂದು ಕರೆದು ಅಧಿಕಾರಕ್ಕೇರಿದಿರಿ. ಆದರೆ 2ಜಿ ಹಗರಣ, ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಅವರನ್ನು ಜೈಲಿಗೆ ಕಳುಹಿಸಲು ನಿಮ್ಮಿಂದ ಸಾಧ್ಯವಾಯಿತೇ? ನೀವು ಅವರನ್ನು ಕಳ್ಳರು ಎಂದಿದ್ದೀರಿ, ಹಾಗಾದ್ರೆ ಅವರೇಕೆ ಇಂದು ಸಂಸತ್ತಿನಲ್ಲಿ ಕುಳಿತಿದ್ದಾರೆ?' ಎಂದು ಅಧಿರ್ ರಂಜನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಕಾರವಾಗಿ ಪ್ರಶ್ನಿಸಿದ್ದಾರೆ.
ಇಂದೇ ವೇಳೆ ಇಂದಿರಾ ಗಾಂಧಿ ಗಂಗೆಯಂತೆ ಪವಿತ್ರಳು, ಆದರೆ ನರೇಂದ್ರ ಮೋದಿ 'ಗಂಧಿ ನಾಲೆ' ಇದ್ದಂತೆ ಎಂದು ಕೊಳಚೆ ಮೋರಿಗೆ ಹೋಲಿಸಿದ್ದಾರೆ. ಅಲ್ಲದೆ ಮೋದಿಯನ್ನು ವಿವೇಕಾನಂದರಿಗೆ ಹೋಲಿಸಬೇಡಿ ಎಂದೂ ಅಧಿರ್ ರಂಜನ್ ಹೇಳಿದರು.
ಕಾಂಗ್ರೆಸ್ ನಾಯಕನ ಈ ಹೇಳಿಕೆಯಿಂದ ಕುಪಿತರಾದ ಬಿಜೆಪಿ ನಾಯಕರು ನೀವು ಕೂಡಾ ನೀವು ಇಂದಿರಾರನ್ನು ಇಂಡಿಯಾಗೆ ಹೋಲಿಸದಿರಿ ಎಂದು ಕಿಡಿ ಕಾರಿದ್ದಾರೆ.
ಒಟ್ಟಾರೆಯಾಗಿ ಅಧಿರ್ ರಂಜನ್ ಅವರು ಮೋದಿ ವಿರುದ್ಧ ನೀಡಿರುವ ಹೇಳಿಕೆಗೆ ಬಿಜೆಪಿ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಸತ್ತಿನಲ್ಲಿ ಕೆಲ ಸಮಯ ಕೋಲಾಹಲ ನಿರ್ಮಾಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com