ಜಾರ್ಖಂಡ್: ಥಳಿತಕ್ಕೊಳಗಾದ ಮುಸ್ಲಿಂ ಯುವಕ ಸಾವು, 11 ಮಂದಿ ಬಂಧನ

ಕಳ್ಳತನದ ಶಂಕೆ ಮೇಲೆ ಆಕ್ರೋಶಿತ ಗುಂಪಿನಿಂದ ಹಿಗ್ಗಾಮುಗ್ಗ ಥಳಿಸಿಕೊಂಡಿದ್ದ 24 ವರ್ಷದ ಯುವಕ ಮೃತಪಟ್ಟಿದ್ದು ಘಟನೆ ಸಂಬಂಧ ...

Published: 25th June 2019 12:00 PM  |   Last Updated: 25th June 2019 12:18 PM   |  A+A-


Some locals thrashed Tabrez and later gave him over to the police.

ಸ್ಥಳೀಯರು ತಬ್ರೆಜ್ ಗೆ ಹೊಡೆದಿರುವುದು

Posted By : SUD
Source : PTI
ಸೆರೈಕೆಲಾ-ಖಾರ್ಸವಾನ್ (ಜಾರ್ಖಂಡ್): ಕಳ್ಳತನದ ಶಂಕೆ ಮೇಲೆ ಆಕ್ರೋಶಿತ ಗುಂಪಿನಿಂದ ಹಿಗ್ಗಾಮುಗ್ಗ ಥಳಿಸಿಕೊಂಡಿದ್ದ 24 ವರ್ಷದ ಯುವಕ ಮೃತಪಟ್ಟಿದ್ದು ಘಟನೆ ಸಂಬಂಧ 11 ಮಂದಿಯನ್ನು ಬಂಧಿಸಲಾಗಿದೆ. 

ಜಾರ್ಖಂಡ್ ರಾಜ್ಯದ ಖಾರ್ಸಾವಾನ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದ್ದು, ಯುವಕನಿಗೆ ಥಳಿಸಿದ ಗುಂಪು ಒತ್ತಾಯಪೂರ್ವಕವಾಗಿ ಯುವಕನ ಕೈಯಲ್ಲಿ ಜೈ ಶ್ರೀರಾಮ್ ಮತ್ತು ಜೈ ಹನುಮಾನ್ ಎಂದು ಹೇಳಿಸುತ್ತಿರುವ ವಿಡಿಯೊ ಪೊಲೀಸರಿಗೆ ಸಿಕ್ಕಿದೆ.  ಕಳೆದ 18 ರಂದು ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತೀವ್ರ ಹಲ್ಲೆಗೀಡಾಗಿದ್ದ 24 ವರ್ಷದ ತಬ್ರೇಜ್ ಅನ್ಸಾರಿಯನ್ನು ಜಾರ್ಖಂಡ್ ನ ಜಮ್ಷೆಡ್ ಪುರದಲ್ಲಿನ ಟಾಟಾ ಮೈನ್ ಆಸ್ಪತ್ರೆಗೆ ಕರೆತರುವಾಗ ಮೃತಪಟ್ಟಿದ್ದು ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ನೇಮಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಅವರು ಸಿನಿ ಮತ್ತು ಖಾರಸ್ವಾನ್ ಪೊಲೀಸ್ ಠಾಣೆಯ ಅಧಿಕಾರಿಗಳಾಗಿದ್ದಾರೆ. 

ಈ ಘಟನೆ  ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ವಿಡಿಯೋದಲ್ಲಿ ತಬ್ರೇಜ್ ಗೆ ಮರದ ತುಂಡಿನಿಂದ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಮತ್ತೊಂದು ವಿಡಿಯೋದಲ್ಲಿ ಜೈ ರಾಮ್, ಜೈ ಹನುಮನ್ ಅಂತ ಹೇಳುವಂತೆ ಒತ್ತಾಯಿಸಲಾಗಿದೆ. 
Stay up to date on all the latest ರಾಷ್ಟ್ರೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp