ರೈತರಿಗೆ ಬೆಳೆ ವಿಮೆ ಆಯ್ಕೆಯಾಗಬೇಕೇ, ಕಡ್ಡಾಯವಾಗಬೇಕೇ? ಸಲಹೆಗಾಗಿ ರಾಜ್ಯಗಳಿಗೆ ಕೇಂದ್ರ ಮನವಿ

ರೈತರಿಗೆ ಬೆಳೆ ವಿಮೆ ಆಯ್ಕೆಯಾಗಬೇಕೋ ಅಥವಾ ಕಡ್ಡಾಯಗೊಳಿಸಬೇಕೋ ಎಂಬುದರ ಕುರಿತು ಸಲಹೆ ...
ಪಂಚಾಯತ್ ರಾಜ್, ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಪರ್ಷೋತ್ತಮ್ ಖೋಡಭಾಯ್ ರೂಪಾಲ
ಪಂಚಾಯತ್ ರಾಜ್, ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಪರ್ಷೋತ್ತಮ್ ಖೋಡಭಾಯ್ ರೂಪಾಲ
ನವದೆಹಲಿ: ರೈತರಿಗೆ ಬೆಳೆ ವಿಮೆ ಆಯ್ಕೆಯಾಗಬೇಕೋ ಅಥವಾ ಕಡ್ಡಾಯಗೊಳಿಸಬೇಕೋ ಎಂಬುದರ ಕುರಿತು ಸಲಹೆ ನೀಡುವಂತೆ ರಾಜ್ಯಗಳಿಗೆ ಸೂಚಿಸಿರುವುದಾಗಿ ಸರ್ಕಾರ ಲೋಕಸಭೆಯಲ್ಲಿ ಮಂಗಳವಾರ ತಿಳಿಸಿದೆ. 
“ಬೆಳೆ ವಿಮೆ ಕುರಿತು ಸಲಹೆ ನೀಡುವಂತೆ ಸೂಚಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಮವಾರ ಪತ್ರ ಬರೆಯಲಾಗಿದ್ದು, ಬೇಡಿಕೆಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿ ಸರ್ಕಾರ ತೊಡಗಿದೆ” ಎಂದು ಪಂಚಾಯತ್ ರಾಜ್, ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಪರ್ಷೋತ್ತಮ್ ಖೋಡಭಾಯ್ ರೂಪಾಲ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದ್ದಾರೆ. 
ಬೆಳೆ ವಿಮೆಯು ದೊಡ್ಡ ಮಟ್ಟದ ಅಪಾಯವನ್ನು ತಗ್ಗಿಸುವ ಮೂಲ ರೈತರಿಗೆ ಲಾಭ ಒದಗಿಸಲಿದೆ. ಪ್ರಧಾನ ಮಂತ್ರಿಯವರ ಫಸಲ್ ಬಿಮಾ ಯೋಜನೆ ಅಥವಾ ಪುನರ್ ರಚಿತ ಹವಾಮಾನ ಆಧಾರಿತ ಬೆಲೆ ವಿಮೆ ಯೋಜನೆಯಲ್ಲಿ, ರೈತರು ನೀಡುವ ಪ್ರೀಮಿಯಂ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೀಮಿಯಂ ಸಬ್ಸಿಡಿಯನ್ನು ಸಂಬಂಧಪಟ್ಟ ವಿಮಾ ಕಂಪನಿಗಳಿಗೆ ಪಾವತಿಸಲಾಗುತ್ತದೆ. ಅಪಾಯದ ಸಂದರ್ಭದಲ್ಲಿ ವಿಮಾ ಮೊತ್ತವನ್ನು ರೈತರಿಗೆ ಪಾವತಿಸಲಾಗುತ್ತದೆ. 
ಈ ಯೋಜನೆಯು ಸಾಲ ಪಡೆಯುವ ರೈತರಿಗೆ ಕಡ್ಡಾಯವಾಗಿದ್ದು, ಉಳಿದ ರೈತರು ಸ್ವಯಂ ತೀರ್ಮಾನ ಕೈಗೊಳ್ಳಬಹುದು. 
ಬೆಳೆ ವಿಮೆ ಮಾಡಿಸುವ ತೀರ್ಮಾನವನ್ನು ರೈತರ ಆಯ್ಕೆಗೆ ಬಿಡಬೇಕೇ ಹೊರತು, ಕಡ್ಡಾಯಗೊಳಿಸಬಾರದು ಎಂದು ರೈತ ಸಂಘಟನೆಗಳೂ ಸೇರಿದಂತೆ ವಿವಿಧ ವಿಭಾಗಗಳು ಮನವಿ ಮಾಡಿರುವುದಾಗಿ ಸಚಿವ ಪರ್ಷೋತ್ತಮ್ ಖೋಡಭಾಯ್ ರೂಪಾಲ ಲೋಕಸಭೆಯಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com