ಭಯಾನಕ ವಿಡಿಯೋ: ಪ್ರತಿಭಟನೆ ವೇಳೆ ಬೆಂಕಿ, ನಾಲ್ವರು ಬಿಜೆಪಿ ಕಾರ್ಯಕರ್ತರಿಗೆ ತೀವ್ರ ಸುಟ್ಟಗಾಯ

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳಿಗೆ ಶಿಕ್ಷೆಗಾಗಿ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆಯಲ್ಲಿ ಬೆಂಕಿಯಿಂದ ನಾಲ್ವರು ಬಿಜೆಪಿ ಕಾರ್ಯಕರ್ತರು ತೀವ್ರವಾಗಿ ಗಾಯಗೊಂಡಿರುವ ಸೋಮವಾರ ನಡೆದಿದೆ.

Published: 25th June 2019 12:00 PM  |   Last Updated: 25th June 2019 12:15 PM   |  A+A-


Protest

ಪ್ರತಿಭಟನೆ

Posted By : ABN ABN
Source : ANI
ವಾರಂಗಲ್ : ತೆಲಂಗಾಣದ ವಾರಂಗಲ್ ನಗರ ಜಿಲ್ಲೆಯ ಸುಬೇದಾರಿ ಪ್ರದೇಶದಲ್ಲಿ 9 ತಿಂಗಳ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳಿಗೆ ಶಿಕ್ಷೆಗಾಗಿ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆಯಲ್ಲಿ ಬೆಂಕಿಯಿಂದ ನಾಲ್ವರು ಬಿಜೆಪಿ ಕಾರ್ಯಕರ್ತರು ತೀವ್ರವಾಗಿ ಗಾಯಗೊಂಡಿರುವ ಸೋಮವಾರ ನಡೆದಿದೆ.

ಅಪ್ರಾಪ್ತ ಬಾಲಕಿಯ ಕುಟುಂಬಸ್ಥರಿಗೆ ನ್ಯಾಯ ದೊರಕಿಸಬೇಕು ಹಾಗೂ ಸರ್ಕಾರದ ಪ್ರತಿಕ್ರಿಯೆಗಾಗಿ ಒತ್ತಾಯಿಸಿ ವಾರಂಗಲ್ ನಗರ ಬಿಜೆಪಿ ಅಧ್ಯಕ್ಷೆ ರಾವ್ ಪದ್ಮ ನೇತೃತ್ವದಲ್ಲಿ  ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ವೇಳೆಯಲ್ಲಿ ಈ ಘಟನೆ ನಡೆದಿದೆ.

ಬಿಜೆಪಿ ಕಾರ್ಯಕರ್ತ ರಾಜು ಎಂಬಾತ ಪೆಟ್ರೋಲ್ ತಂದು ಪ್ರತಿಕೃತಿ ದಹಿಸಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಬೆಂಕಿಯ ಜ್ವಾಲೆ ಸುತ್ತಮುತ್ತ ಹರಡಿ ನಾಲ್ವರು ಬಿಜೆಪಿ ಕಾರ್ಯಕರ್ತರಿಗೆ ಸುಟ್ಟ ಗಾಯಗಳಾಗಿವೆ.

 ಶ್ರೀನಿವಾಸ್ ಎಂಬವರಿಗೆ  ಶೇ. 30 ರಷ್ಟು ಸುಟ್ಟಗಾಯಗಳಾಗಿವೆ. ರಾವ್ ಪದ್ಮ ಸೇರಿದಂತೆ ಇತರ ಮೂವರಿಗೆ ಸಣ್ಣ ಪ್ರಮಾಣದ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಇನ್ಸ್ ಪೆಕ್ಟರ್  ಸದಾಯ್ಯ ತಿಳಿಸಿದ್ದಾರೆ. 

ಸುಟ್ಟ ಗಾಯಾಳುಗಳನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದ ಪೊಲೀಸ್ ವಾಹನಕ್ಕೆ ಹಾನಿಯಾಗಿದೆ. ಈ ಘಟನೆ ಸಂಬಂಧ ಎರಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕಾನೂನು ಬಾಹಿರ ಚಟುವಟಕೆ ಹಾಗೂ ಪೊಲೀಸ್ ವಾಹನಕ್ಕೆ ಹಾನಿ ಸಂಬಂಧ  ಪ್ರತಿಭಟನಾಕಾರರ ವಿರುದ್ಧ  ಎರಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸದಾಯ್ಯ ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp