2022 ರೊಳಗೆ ಎಲ್ಲರಿಗೂ ಸೂರು- ಪ್ರಧಾನಿ ನರೇಂದ್ರ ಮೋದಿ

ದೇಶದ ನಗರ ಪ್ರದೇಶಗಳ ಸ್ವರೂಪವನ್ನೇ ಬದಲಿಸಲು ಎಲ್ಲರಿಗೂ ವಸತಿ ಕಲ್ಪಿಸಬೇಕೆಂಬ ಕನಸು ನನಸು ಮಾಡಲು ತಮ್ಮ ಸರ್ಕಾರ ಎಲ್ಲ ಪ್ರಯತ್ನ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
ನವದೆಹಲಿ: ದೇಶದ ನಗರ ಪ್ರದೇಶಗಳ ಸ್ವರೂಪವನ್ನೇ ಬದಲಿಸಲು ಎಲ್ಲರಿಗೂ ವಸತಿ ಕಲ್ಪಿಸಬೇಕೆಂಬ ಕನಸು ನನಸು ಮಾಡಲು ತಮ್ಮ ಸರ್ಕಾರ ಎಲ್ಲ ಪ್ರಯತ್ನ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿ ಆವಾಸ್ ಯೋಜನಾ (ನಗರ) ಪುನಶ್ಚೇತನ ಮತ್ತು ನಗರ ಪರಿವರ್ತನೆಗಾಗಿ ಅಟಲ್ ಮಿಷನ್ ( ಅಮೃತ್ ) ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ಟ್ವೀಟ್ ನಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.
ಈ ಉಪಕ್ರಮಗಳಿಂದ ದಾಖಲೆ ಪ್ರಮಾಣದ ಹೂಡಿಕೆ, ವೇಗ ತಂತ್ರಜ್ಞಾನದ ಬಳಕೆ ಹಾಗೂ ಸಾರ್ವಜನಿಕರ ಸಹಭಾಗಿತ್ವವಾಗಿದೆ.ನಗರ ಪ್ರದೇಶಗಳ ಮೂಲ ಸೌಕರ್ಯವನ್ನು ಮತ್ತಷ್ಟು ಸುಧಾರಿಸಲು ಸರ್ಕಾರ ಬದ್ಧವಾಗಿದೆ.ಎಲ್ಲರಿಗೂ ಸೂರು ಕಲ್ಪಿಸಬೇಕೆಂಬ ಕನಸು ನನಸು ಮಾಡುವ ಮೂಲಕ ಸ್ವಂತ ಸೂರು ಹೊಂದುವ ಕೊಟ್ಯಂತರ ಜನರ ಆಸೆ ಈಡೇರಿಸಲಾಗುವುದು ಎಂದಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಅಮೃತ್ ಸ್ಮಾರ್ಟ್ ಸಿಟಿ ಉಪ ಕ್ರಮಗಳನ್ನು ದೇಶದ ನಗರ ಪ್ರದೇಶಗಳ ಸ್ವರೂಪ ಬದಲಾಯಿಸುವ ಉದ್ದೇಶದಿಂದ ಆರಂಭಿಸಲಾಯಿತು. ಈ ಯೋಜನೆಗಳು ನಗರಾಭಿವೃದ್ಧಿಯಲ್ಲಿ ಹೊಸ ಮಾದರಿಯಾಗಿದ್ದು, ಕೋಟ್ಯಂತ ಜನರ ಬದುಕುಗಳನ್ನು ಬದಲಾಯಿಸಿವೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಕೇಂದ್ರ ಸರ್ಕಾರ ನಗರ ಪ್ರದೇಶಗಳ ಬಡವರಿಗೆ 2022ರ ಮಾರ್ಚ್ 31ರ ವೇಳೆಗೆ 20 ದಶಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.ಈ ಯೋಜನೆಯ ಜೊತೆಗೆ ಪ್ರತಿ ಮನೆಗೆ ಕಡ್ಡಾಯ ಶೌಚಾಲಯ, ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕ, ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ , ಶುದ್ಧ ಕುಡಿಯುವ ನೀರು ಹಾಗೂ ಜನಧನ್  ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com