ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ Z ಪ್ಲಸ್ ಭದ್ರತೆ ಹಿಂಪಡೆದ ಜಗನ್ ಸರ್ಕಾರ

ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಎನ್‌ ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ಮಾಜಿ ಸಚಿವ ನಾರಾ ಲೋಕೇಶ್ ಅವರಿಗೆ...

Published: 25th June 2019 12:00 PM  |   Last Updated: 25th June 2019 05:55 AM   |  A+A-


Jagan government downgrades Z category security for Nara Lokesh

ಚಂದ್ರಬಾಬು ನಾಯ್ಡು

Posted By : LSB LSB
Source : The New Indian Express
ಹೈದರಾಬಾದ್: ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಎನ್‌ ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ಮಾಜಿ ಸಚಿವ ನಾರಾ ಲೋಕೇಶ್ ಅವರಿಗೆ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಆಂಧ್ರ ಪ್ರದೇಶ ಸರ್ಕಾರ ಹಿಂಪಡೆದಿದೆ. 

ನಾಯ್ಡು ಕುಟುಂಬದ ಇತರೆ ಸದಸ್ಯರಿಗೆ ನೀಡಲಾಗಿದ್ದ ವಿಶೇಷ ಭದ್ರತೆಯನ್ನು ಸಹ ಜಗನ್ ಮೋಹನ್ ರೆಡ್ಡಿ ಸರ್ಕಾರ ಹಿಂಪಡೆದಿದ್ದು, ನಾರಾ ಲೋಕೇಶ್ ಅವರಿಗೆ ಇಬ್ಬರು ಗನ್‌ಮೆನ್‌ಗಳ ಭದ್ರತೆ ಮಾತ್ರ ನೀಡಲು ನಿರ್ಧರಿಸಿದೆ.

ಸದ್ಯ ಪ್ರತಿಪಕ್ಷ ನಾಯಕರಾಗಿರುವ ಚಂದ್ರಬಾಬು ನಾಯ್ಡು ಅವರಿಗೆ ನಕ್ಸಲರಿಂದ ಜೀವಬೆದರಿಕೆ ಇರುವ ಹಿನ್ನಲೆಯಲ್ಲಿ ಅವರಿಗೆ ಝಡ್‌ ಪ್ಲಸ್ ಭದ್ರತೆ ಮುಂದುವರೆಸಲಾಗಿದೆ.

ಜಗನ್ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಟಿಡಿಪಿ ನಾಯಕರು, ಜಗನ್ಮೋಹನ್ ರೆಡ್ಡಿ ಅವರ ವೈಎಸ್ಸಾರ್‌ಸಿಪಿ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ದೂರಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp