ಆಂಧ್ರ ಪ್ರದೇಶ: ಆಧಾರ್ ಕಾರ್ಡ್‌ನಲ್ಲಿ ಜಾತಿ ಹೆಸರಿಲ್ಲದ್ದಕ್ಕೆ ವಿವಾಹ ರದ್ದು!

ವಧುವಿನ ಜಾರಿಯ ಕುರಿತಾಗಿ ಮೂಡಿದ ಅನುಮಾನವೇ ಸಂಭ್ರದಿಂದ ನಡೆಯಬೇಕಿದ್ದ ಮದುವೆಯನ್ನು ಕಡೇ ಕ್ಷಣದಲ್ಲಿ ರದ್ದಾಗುವಂತೆ ಮಾಡಿರುವ ಘಟನೆ ಆಂಧ್ರಪ್ರದೇಶದ ಪೆದಕಕೇಣಿ ಎಂಬಲ್ಲಿ ನಡೆದಿದೆ
ಆಧಾರ್  ಕಾರ್ಡ್‌
ಆಧಾರ್ ಕಾರ್ಡ್‌
ಗುಂಟೂರ್: ವಧುವಿನ ಜಾರಿಯ ಕುರಿತಾಗಿ ಮೂಡಿದ ಅನುಮಾನವೇ ಸಂಭ್ರದಿಂದ ನಡೆಯಬೇಕಿದ್ದ ಮದುವೆಯನ್ನು ಕಡೇ ಕ್ಷಣದಲ್ಲಿ ರದ್ದಾಗುವಂತೆ ಮಾಡಿರುವ ಘಟನೆ ಆಂಧ್ರಪ್ರದೇಶದ ಪೆದಕಕೇಣಿ ಎಂಬಲ್ಲಿ ನಡೆದಿದೆ. ಭಾನುವಾರ ರಾತ್ರಿ ನಡೆದ ಈ ಪ್ರಕರಣದ ಕುರಿತು ಯಾವುದೇ ಮಹತ್ವದ ಕಾರಣವಿಲ್ಲದೆ ವಿವಾಹವನ್ನು ರದ್ದುಗೊಳಿಸಿದ ಆರೋಪ ಮಾಡಿ ವಧುವಿನ ಕುಟುಂಬ ವರನ ಕಡೆಯವರ ಮೇಲೆ ಪೋಲೀಸರಿಗೆ ದೂರು ಸಲ್ಲಿಸಿದೆ.
ಘಟನೆ ವಿವರ
ಪೆದಕಕೇಣಿ ಶ್ರೀ ಭ್ರಮರಾಂಭ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಾಹ ನಡೆಯಲಿತ್ತು. ಆಗ ಅರ್ಚಕರು ಮದುಮಗ, ವಧು ದೇವಾಲಯದ ರಿಜಿಸ್ಟರ್‌ನಲ್ಲಿ ತಮ್ಮ ಹೆಸರುಗಳನ್ನು ನಮೂದಿಸಲು ಆಧಾರ್ ಕಾರ್ಡ್‌ಗಳನ್ನು ಸಲ್ಲಿಸುವಂತೆ ಕೇಳಿಕೊಂಡರು.
ವಧುವಿನ ಆಧಾರ್ ಕಾರ್ಡ್‌ನಲ್ಲಿ, ಶಾರದಾ ಎಂದಿದ್ದು ಆಕೆಯ ತಂದೆ ಹೆಸರು ಪಿಡುಗು ಅಂಜನೇಯುಲು ಎಂದು ಉಲ್ಲೇಖಿಸಲಾಗಿತ್ತು. ಆದರೆ ಅದರಲ್ಲಿ ರೆಡ್ಡಿ ಎಂಬ ಜಾತಿಸೂಚಕ ಪದ ಇರಲಿಲ್ಲ. ಆಗ ಇದನ್ನು ಕಂಡ ಅರ್ಚಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅರ್ಚಕರ ಅನುಮಾನದ ನುಡಿ ಕೇಳಿದ ಮದುಮಗ ಹಾಗೂ ಅವನ ಪೋಷಕರು ಮತ್ತು ಸಂಬಂಧಿಕರು ಜಗಳಕ್ಕೆ ಮುಂದಾಗಿದ್ದಾರೆ.ಮದುಮಗ ವೆಂಕಟ ರೆಡ್ಡಿ ಮತ್ತು ಅವರ ತಂದೆ ಮುನ್ನಗಿ ಅಪ್ಪಿ ರೆಡ್ಡಿ  ಸತ್ತನಪಲ್ಲಿ ಮಂಡಲದ ಗುಡಿಪಾದು ಗ್ರಾಮಕ್ಕೆ ಸೇರಿದ್ದವರು.ಇದಾಗಿ ವಧುವಿನ ತಂದೆ ಗಡೇವರ್ಪಲ್ಲಿ ಗ್ರಾಮದ  ಪಿಡುಗು ಅಂಜನೇಯುಲು ಅವರು ಪಿಚಿಕುಂಟಾ ರೆಡ್ಡಿ ಉಪಜಾತಿಗೆ ಸೇರಿದವರಾದರೂ ರೆಡ್ಡಿ ಪ್ರತ್ಯಯವನ್ನು ತಮ್ಮ ಹೆಸರಿಗೆ ಸೇರಿಸುವ ಸಂಪ್ರದಾಯವನ್ನು ಹೊಂದಿಲ್ಲ ಎಂದು ವಾದಿಸಿದರು. ಆದರೆ ವಧುವಿನ ತಂದೆ ನೀಡಿದ ವಿವರಣೆ ಅಪ್ಪಿ ರೆಡ್ಡಿ ಅವರಿಗೆ ಸಮಾಧಾನ ತಂದಿಲ್ಲ. ಅವರು ವಿವಾಹವನ್ನು ರದ್ದು ಮಾಡಿದ್ದಾರೆ.
ಘಟನೆಯ ನಂತರ, ಅಂಜನೆಯುಲು ಅಪ್ಪಿ ರೆಡ್ಡಿ ವಿರುದ್ಧ ಕ್ರೋಸುರು ಪೊಲೀಸರಿಗೆ ದೂರು ನೀಡಿದ್ದರು. ಶ್ರೀ ಭ್ರಮರಂಬಾ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಇಒಡಿ ಸುಬ್ಬಾ ರಾವ್ ಅವರು ಅರ್ಚಕರ ಮೂಲಕ ಮದುವೆ ರದ್ದತಿ ಬಗ್ಗೆ ತಿಳಿದುಕೊಂಡರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com