ಹಿರಿಯ ಟಿಡಿಪಿ ನಾಯಕ ಅಂಬಿಕಾ ಕೃಷ್ಣ ಬಿಜೆಪಿ ಸೇರ್ಪಡೆ

ಮಾಜಿ ಶಾಸಕ, ಟಿಡಿಪಿ ಹಿರಿಯ ನಾಯಕ ಅಂಬಿಕಾ ಕೃಷ್ಣ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದು, ಇದರಿಂದ ತೆಲುಗುದೇಶಂ ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.

Published: 25th June 2019 12:00 PM  |   Last Updated: 25th June 2019 07:05 AM   |  A+A-


Senior TDP leader Ambika Krishna joins BJP

ಹಿರಿಯ ಟಿಡಿಪಿ ನಾಯಕ ಅಂಬಿಕಾ ಕೃಷ್ಣ ಬಿಜೆಪಿ ಸೇರ್ಪಡೆ

Posted By : SBV SBV
Source : Online Desk
ಏಲೂರು: ಮಾಜಿ ಶಾಸಕ, ಟಿಡಿಪಿ ಹಿರಿಯ ನಾಯಕ ಅಂಬಿಕಾ ಕೃಷ್ಣ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದು, ಇದರಿಂದ ತೆಲುಗುದೇಶಂ ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.  
  
ಮಂಗಳವಾರ ದೆಹಲಿಯಲ್ಲಿ ಬಿಜೆಪಿ ನಾಯಕ ರಾಮ್ ಮಾಧವ್ ಅವರ ಸಮ್ಮುಖದಲ್ಲಿ ಅಂಬಿಕಾ ಕೃಷ್ಣ ತೆಲುಗು ದೇಶಂ ತೊರೆದು ಬಿಜೆಪಿ ಸೇರ್ಪಡೆಯಾದರು. ಅಂಬಿಕಾ ಸಮೂಹ ಕಂಪನಿಗಳ ಅಧ್ಯಕ್ಷ ಅಂಬಿಕಾ ಕೃಷ್ಣ ಅವರು ಪಶ್ಚಿಮ ಗೋದಾವರಿ ಜಿಲ್ಲೆಯ ಜನಪ್ರಿಯ ನಾಯಕರಾಗಿದ್ದಾರೆ.
  
ಟಿಡಿಪಿಯಲ್ಲಿನ ಆಂತರಿಕ ಬೆಳವಣಿಗೆಗಳ ಬಗ್ಗೆ ಅಂಬಿಕಾಕೃಷ್ಣ ಅಸಮಾಧಾನ ಹೊಂದಿದ್ದಾರೆ ಎಂದು ಅವರ ಬೆಂಬಲಿಗರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಇದೇ ವೇಳೆ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಬಲಪಡಿಸುವುದಾಗಿ ಅಂಬಿಕಾ ಕೃಷ್ಣ ಬೆಂಬಲಿಗರು ಶಪಥ ಮಾಡಿದ್ದಾರೆ. ಇತ್ತೀಚೆಗೆ ನಾಲ್ವರು ಟಿಡಿಪಿ ರಾಜ್ಯಸಭಾ ಸದಸ್ಯರು ಪಕ್ಷವನ್ನು ತೊರೆದು  ಬಿಜೆಪಿಗೆ ಸೇರ್ಪಡೆಗೊಂಡಿದ್ದನ್ನು ಎಂದು ಇಲ್ಲಿ ಉಲ್ಲೇಖಿಸಬಹುದಾಗಿದೆ. 
  
ಇವರ ಪೈಕಿ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ವೈ.ಎಸ್.ಚೌಧರಿ ಸೇರಿದ್ದಾರೆ. ಆಂಧ್ರಪ್ರದೇಶದಲ್ಲಿ ಚುನಾವಣಾ ಪೂರ್ವದಲ್ಲಿ ಟಿಡಿಪಿಯ ಅನೇಕ ಶಾಸಕರು ಹಾಗೂ ನೂರಾರು ಮುಖಂಡರು ವೈಎಸ್‍ಆರ್.ಕಾಂಗ್ರೆಸ್ ಯಾಗಿದ್ದರು. ಇದೀಗ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದವಂತೆ ಟಿಡಿಪಿ ನಾಯಕರ ಪಕ್ಷಾಂತರ ಪರ್ವ ಮತ್ತೊಮ್ಮೆ ಆರಂಭಗೊಂಡಿದೆ. 
  
ಏಕಕಾಲಕ್ಕೆ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ ಹೀನಾಯ ಸೋಲು ಅನುಭವಿಸಿ ಸಂಕಷ್ಟ ಸ್ಥಿತಿಯಲ್ಲಿರುವ ಸಂದರ್ಭದಲ್ಲೇ ನಾಯಕರು  ತೊರೆಯುತ್ತಿರುವುದು ಪಕ್ಷದ ತೀವ್ರ ಹೊಡೆತವೆಂದೇ ಭಾವಿಸಲಾಗಿದೆ. ಬಿಜೆಪಿ ಇದರಿಂದ ದೊಡ್ಡ ಲಾಭವನ್ನೇ ಮಾಡಿಕೊಳ್ಳುತ್ತಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp