ಸ್ವಾತಂತ್ರ್ಯ ಹೋರಾಟಗಾರ ಮೋಹನ್ ರಾನಡೆ ನಿಧನ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮೋಹನ್ ರಾನಡೆ ಮಂಗಳವಾರ ಪುಣೆಯ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಣಜಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮೋಹನ್ ರಾನಡೆ ಮಂಗಳವಾರ ಪುಣೆಯ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. 
ಅವರಿಗೆ  90ವರ್ಷ  ವಯಸ್ಸಾಗಿತ್ತು. ಗೋವಾ ವಿಮೋಚನಾ ಚಳವಳಿಯ ಪ್ರಮುಖ ವ್ಯಕ್ತಿಗಳಲ್ಲಿ ರಾನಡೆ ಪ್ರಮುಖರಾಗಿದ್ದರು. ಅವರು ಕೆಲ ಕಾಲದಿಂದ  ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಪುಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ರಾನಡೆ ಅವರನ್ನು 1995 ರಲ್ಲಿ ಗೋವಾದ ವಿಮೋಚನೆಯ  ಚಳವಳಿಗಾಗಿ ನಡೆಸಿದ ಹೋರಾಟಕ್ಕಾಗಿ ಅವರನ್ನು ಪೊಲೀಸರು ಬಂಧಿಸಿದ್ದರು.  ಅವರು ನಂತರ  14 ವರ್ಷಗಳ ಜೈಲಿನಲ್ಲೇ  ಕಳೆದರು. ಗೋವಾದ ವಿಮೋಚನೆಯ ನಂತರ, ಅವರು 1969 ರಲ್ಲಿ ಬಿಡುಗಡೆಯಾದರು. 
1929 ರಲ್ಲಿ ಜನಿಸಿದ ಅವರು ಗಣೇಶ್ ದಾಮೋದರ್ ಸಾವರ್ಕರ್ ಮತ್ತು ವಿನಯ್ ದಾಮೋದರ್ ಸಾವರ್ಕರ್ ಅವರಂತಹ ನಾಯಕರ ಸ್ಫೂರ್ತಿ ಪಡೆದರು. ವೃತ್ತಿಯಲ್ಲಿ ವಕೀಲರಾಗಿದ್ದ ರಾನಡೆ  ಅವರಿಗೆ 2001 ರಲ್ಲಿ ಪದ್ಮಶ್ರೀ ಮತ್ತು 2006 ರಲ್ಲಿ ಸಾಂಗ್ಲಿ ಭೂಷಣ್ ಪ್ರಶಸ್ತಿ ನೀಡಲಾಗಿತ್ತು. ಕುಟುಂಬದ ಮೂಲಗಳ ಅವರ ಪತ್ನಿ ಕೆಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com