ಗುರಿ ತಪ್ಪಿಲ್ಲ, ನಿಖರವಾಗಿ ಉಗ್ರರ ಕ್ಯಾಂಪ್ ಉಡಾಯಿಸಿದ್ದೇವೆ: ಏರ್ ಸ್ಟ್ರೈಕ್ ಪೈಲಟ್ ಗಳು

ಪಾಕಿಸ್ತಾನದ ಬಾಲಾಕೋಟ್ ನಲ್ಲಿದ್ದ ಎಲ್ಲ ಉಗ್ರ ಕ್ಯಾಂಪ್ ಗಳನ್ನು ಯಶಸ್ವಿಯಾಗಿ ಉಡಾಸಿದ್ದೇವೆ ಎಂದು ವಾಯುದಾಳಿ ನಡೆಸಿದ್ದ ಭಾರತೀಯ ಸೇನೆಯ ಪೈಲಟ್ ಗಳು ಹೇಳಿದ್ದಾರೆ.

Published: 25th June 2019 12:00 PM  |   Last Updated: 25th June 2019 12:24 PM   |  A+A-


'We Didn't Miss' - Air Force Pilots Who Flew Balakot air strike Mission

ಸಂಗ್ರಹ ಚಿತ್ರ

Posted By : SVN SVN
Source : Online Desk
ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ ನಲ್ಲಿದ್ದ ಎಲ್ಲ ಉಗ್ರ ಕ್ಯಾಂಪ್ ಗಳನ್ನು ಯಶಸ್ವಿಯಾಗಿ ಉಡಾಸಿದ್ದೇವೆ ಎಂದು ವಾಯುದಾಳಿ ನಡೆಸಿದ್ದ ಭಾರತೀಯ ಸೇನೆಯ ಪೈಲಟ್ ಗಳು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಪೈಲಟ್ ಗಳು ಜೈಷ್ ಇ ಮೊಹಮದ್ ಉಗ್ರ ಸಂಘಟನೆಯ ಉಗ್ರರು ಅಡಗಿದ್ದ ಬಾಲಾಕೋಟ್ ನಲ್ಲಿನ ಕ್ಯಾಂಪ್ ಗಳು ನಮ್ಮ ಗುರಿಗಳಾಗಿತ್ತು. ನಮ್ಮ ಹಿರಿಯ ಅಧಿಕಾರಿಗಳ ಆದೇಶದಂತೆ ನಾವು ಪಾಕಿಸ್ತಾನ ಆಕ್ರಮಿತ ಗಡಿಯೊಳಗೆ ನುಗ್ಗಿ ನಮಗೆ ನೀಡಲಾಗಿದ್ದ ಗುರಿಗಳನ್ನು ಅತ್ಯಂತ ಯಶಸ್ವಿಯಾಗಿ ಮತ್ತು ನಿಖರವಾಗಿ ಧ್ವಂಸ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇಡೀ ಕಾರ್ಯಾಚರಣೆ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದಿತ್ತು. ನಮ್ಮ ವಿಮಾನದಲ್ಲಿದ್ದ ಸ್ಪೈಸ್ 2000 ಉಪಗ್ರಹ ನಿಯಂತ್ರಿತ ಬಾಂಬ್ ಗಳ ಗುರಿಗಳ ಮೇಲೆ ಉಡಾಯಿಸಿದ್ದೆವು. ಬಾಂಬ್ ಗಳು ನಿಖರವಾಗಿ ಗುರಿ ತಲುಪಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು ಎಂದು ಹೇಳಿದ್ದಾರೆ. ಇನ್ನು ವಾಯುದಾಳಿಯ ಸತ್ಯಾಸತ್ಯತೆ ಕುರಿತು ಎದ್ದಿದ್ದ ವಿವಾದಗಳಿಗೆ ಉತ್ತರ ನೀಡಿರುವ ಮತ್ತೋರ್ವ ಪೈಲಟ್ ಸ್ಪೈಸ್ 2000 ಬಾಂಬ್ ಸಾಮಾನ್ಯ ವರ್ಗದ ಬಾಂಬ್ ಅಲ್ಲ. ಅದರ ಗುರಿ ತಪ್ಪಲು ಸಾಧ್ಯವೇ ಇಲ್ಲ. ತಾಂತ್ರಿಕ ದೋಷವನ್ನು ಹೊರತು ಪಡಿಸಿದರೆ, ಯಾವುದೇ ರೀತಿಯ ಹವಾಮಾನದಲ್ಲೂ ಗುರಿಗಳ ಮೇಲೆ ಅದು ನಿಖರ ದಾಳಿ ಮಾಡಬಲ್ಲದು ಎಂದು ಹೇಳಿದ್ದಾರೆ.

ಕಾರ್ಯಾಚರಣೆಗೂ ಮುನ್ನ ಒತ್ತಡದಿಂದ ಸಾಕಷ್ಟು ಸಿಗರೇಟ್ ಸೇದಿದ್ದೆವು
ಇನ್ನು ಕಾರ್ಯಾಚರಣೆಯ ವ್ಯಾಪ್ತಿ ತಿಳಿದ ಮೇಲೆ ನಾವು ಒತ್ತಡಕ್ಕೆ ಒಳಗಾಗಿದ್ದೆವು. ಹೀಗಾಗಿ ಒತ್ತಡ ನಿಭಾಯಿಸಲು ಸಾಕಷ್ಟು ಸಿಗರೇಟ್ ಸೇದಿದ್ದೆವು ಎಂದು ಮತ್ತೋರ್ವ ಪೈಲಟ್ ಹೇಳಿದ್ದಾರೆ. ಪುಲ್ವಾಮದಲ್ಲಿ ಭಾರತೀಯ ಸೇನೆಯ ವಾಹನಗಳ ಮೇಲೆ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ 40ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರನ್ನು ಕೊಂದು ಹಾಕಿತ್ತು. ಇತರ ಪ್ರತೀಕಾರವಾಗಿ ಸೇನೆ ವಾಯು ದಾಳಿ ನಡೆಸಿತ್ತು. ಕಳೆದ ಫ್ರೆಬ್ರವರಿ 26 ರಂದು ಭಾರತೀಯ ಸೇನೆ ಬಾಲಾಕೋಟ್ ದಾಳಿ ನಡೆಸಲು 12 ಮಿರಾಜ್ 2000 ಜೆಟ್ ಗಳನ್ನು ನಿಯೋಜಿಸಿತ್ತು. ಇಸ್ರೇಲ್ ನಿರ್ಮಿತ ಸ್ಪೈಸ್ 2000 ಸರಣಿಯ ಎರಡು ಮಾದರಿಯ ಬಾಂಬ್ ಗಳನ್ನು ವಿಮಾನಗಳಿಗೆ ಅಳವಡಿಸಿ ದಾಳಿ ನಡೆಸಲು ಸೂಚಿಸಲಾಗಿತ್ತು. ಅದರಂತೆ ಅಂದು ಉಗ್ರ ಕ್ಯಾಂಪ್ ಗಳನ್ನು ವಾಯುಸೇನೆಯ ಪೈಲಟ್ ಗಳು ಉಡಾಯಿಸಿದ್ದರು. ಪರಿಣಾಮ ಅಲ್ಲಿ ಅಡಗಿದ್ದ ಉಗ್ರರ ಪೈಕಿ ನೂರಾರು ಉಗ್ರರು ಸಾವನ್ನಪ್ಪಿದ್ದರು.
Stay up to date on all the latest ರಾಷ್ಟ್ರೀಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp