ಜೈ ಶ್ರೀರಾಮ್ ಪಠಿಸದಿದ್ದಕ್ಕೆ ಪ.ಬಂ.ಳದ ಮದ್ರಾಸಾ ಶಿಕ್ಷಕ ಮೇಲೆ ಹಲ್ಲೆ; ದೂರು ದಾಖಲು

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಜೈ ಶ್ರೀರಾಮ್ ಎಂದು ಹೇಳಲು ನಿರಾಕರಿಸಿದ್ದಕ್ಕೆ ಚಲಿಸುತ್ತಿದ್ದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೋಲ್ಕತ್ತಾ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಜೈ ಶ್ರೀರಾಮ್ ಎಂದು ಹೇಳಲು ನಿರಾಕರಿಸಿದ್ದಕ್ಕೆ ಚಲಿಸುತ್ತಿದ್ದ ರೈಲಿನಿಂದ ಮದ್ರಾಸಾ ಶಿಕ್ಷಕರೊಬ್ಬರನ್ನು ಹೊರದಬ್ಬಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಘಟನೆ ನಡೆದ ಎರಡು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಜಾರ್ಖಂಡ್ ನಲ್ಲಿ 22 ವರ್ಷದ ಯುವಕ ತಬ್ರೆಝ್ ಅನ್ಸರಿನನ್ನು ಯುವಕರ ಗುಂಪು ಒತ್ತಾಯಪೂರ್ವಕವಾಗಿ ಜೈ ಶ್ರೀರಾಮ್ ಮತ್ತು ಜೈ ಹನುಮಾನ್ ಎಂದು ಪಠಿಸುವಂತೆ ಹೇಳಿದ್ದಕ್ಕೆ ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಿ ಆತ ನಿಧನ ಹೊಂದಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
26 ವರ್ಷದ ಮದ್ರಸಾ ಶಿಕ್ಷಕ ಹಫೀಜ್ ಮೊಹಮ್ಮದ್ ಶಾರೂಖ್ ಹಲ್ದರ್ ಪಶ್ಚಿಮ ಬಂಗಾಳದ ಹೂಗ್ಲಿಯಿಂದ ಕಳೆದ ಗುರುವಾರ ರಾತ್ರಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದುಷ್ಕರ್ಮಿಗಳ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಜನರ ಗುಂಪೊಂದು ತಮ್ಮ ಬಳಿ ಬಂದು ಜೈ ಶ್ರೀ ರಾಮ್ ಎಂದು ಪಠಿಸುವಂತೆ ಒತ್ತಾಯಿಸಿದರು. ನಿರಾಕರಿಸಿದಾಗ ಹೊಡೆಯಲು ಆರಂಭಿಸಿದರು. ನಂತರ ಪಾರ್ಕ್ ಸರ್ಕಸ್ ಸ್ಟೇಷನ್ ಬಳಿ ಬರುವ ಹೊತ್ತಿಗೆ ಚಲಿಸುತ್ತಿರುವ ರೈಲಿನಿಂದ ತಳ್ಳಿದರು ಎಂದು ಅಧಿಕಾರಿ ಹೇಳಿದ್ದಾರೆ.
ಹಲ್ದರ್ ನ ಕೈ ಮತ್ತು ಕಣ್ಣುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಕಳೆದ ಸೋಮವಾರ ಪ್ರಕರಣ ಸಂಬಂಧಪಟ್ಟಂತೆ ಬಲ್ಲಿಗುಂಜ್ ಜಿಆರ್ ಪಿಎಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com