ಟಿಡಿಪಿ ಕಚೇರಿ 'ಪ್ರಜಾವೇದಿಕಾ' ಕೊನೆಗೂ ನೆಲಸಮ, ಮಾಜಿ ಸಿಎಂ ನಾಯ್ಡುಗೆ ತೀವ್ರ ಮುಖಭಂಗ

ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಜಂಗೀ ಕುಸ್ತಿಗೆ ಕಾರಣವಾಗಿದ್ದ ಟಿಡಿಪಿ ಕಚೇರಿ 'ಪ್ರಜಾವೇದಿಕಾ' ಕಟ್ಟವನ್ನು ಆಂಧ್ರ ಪ್ರದೇಶ ಸರ್ಕಾರ ಕೊನೆಗೂ ಧರೆಗುರುಳಿಸಿದೆ.

Published: 26th June 2019 12:00 PM  |   Last Updated: 26th June 2019 01:38 AM   |  A+A-


Bulldozers raze Rs 8 crore complex built by Chandra babu Naidu

ಪ್ರಜಾ ವೇದಿಕ ತೆರವು ಕಾರ್ಯಾಚರಣೆ

Posted By : SVN SVN
Source : Online Desk
ಅಮರಾವತಿ: ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಜಂಗೀ ಕುಸ್ತಿಗೆ ಕಾರಣವಾಗಿದ್ದ ಟಿಡಿಪಿ ಕಚೇರಿ 'ಪ್ರಜಾವೇದಿಕಾ' ಕಟ್ಟವನ್ನು ಆಂಧ್ರ ಪ್ರದೇಶ ಸರ್ಕಾರ ಕೊನೆಗೂ ಧರೆಗುರುಳಿಸಿದೆ.

ತೆಲುಗುದೇಶಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಅವರು, ಪಕ್ಷದ ಚಟುವಟಿಕೆಗಳಿಗಾಗಿ ತಮ್ಮ ಅಧಿಕಾರಾವಧಿಯಲ್ಲಿ ನಿರ್ಮಿಸಿದ್ದ ‘ಪ್ರಜಾ ವೇದಿಕೆ’ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ನೂತನ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ರಚನೆ ಬಳಿಕ ನಾಯ್ಡು ವಿರುದ್ಧ ಕೈಗೊಂಡ ಮೊದಲ ಕ್ರಮ ಇದಾಗಿದ್ದು,  ಮಂಗಳವಾರ ರಾತ್ರಿಯಿಂದಲೇ ಕಟ್ಟಡವನ್ನು ನೆಲಸಮ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಆಂಧ್ರಪ್ರದೇಶದ ‘ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ವು (ಸಿಆರ್‌ಡಿಎ) ಕಟ್ಟಡವವನ್ನು ವಶಕ್ಕೆ ಪಡೆದು ಸಂಪೂರ್ಣ ಕೆಡವಿ ಹಾಕಿದೆ. 

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ನಿವಾಸದ ಸಮೀಪದಲ್ಲಿಯೇ ಈ ಪ್ರಜಾ ವೇದಿಕ ನಿರ್ಮಾಣವಾಗಿದ್ದು, ಆರಂಭದಲ್ಲಿ ಈ ಕಟ್ಟಡ ಕಾಮಗಾರಿ ವೆಚ್ಚ 5 ಕೋಟಿ ಎಂದು ಹೇಳಲಾಗಿತ್ತು. ಆದರೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹೊತ್ತಿಗೆ ಅದು 8 ಕೋಟಿಯಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp