ಅಯೋಧ್ಯೆಯಲ್ಲಿ ಮುಸ್ಲೀಮರ ಸ್ಮಶಾನಕ್ಕೆ ಹಿಂದೂಗಳಿಂದ ಭೂದಾನ!

ಹಿಂದೂ-ಮುಸ್ಲಿಂರ ಐಕ್ಯತೆಗೆ ಸಾಕ್ಷಿಯಾಗಿ ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ಸ್ಮಶಾನಕ್ಕಾಗಿ ಮುಸಲ್ಮಾನರಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅಯೋಧ್ಯೆ: ಹಿಂದೂ-ಮುಸ್ಲಿಂರ ಐಕ್ಯತೆಗೆ ಸಾಕ್ಷಿಯಾಗಿ ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ಸ್ಮಶಾನಕ್ಕಾಗಿ ಮುಸಲ್ಮಾನರಿಗೆ ಹಿಂದೂಗಳು ಭೂಮಿ ನೀಡಿದ್ದಾರೆ. ವಿವಾದಿತ ರಾಮ ಮಂದಿರ ನಿರ್ಮಾಣಕ್ಕೆ ಇಂತಹ ಹೆಜ್ಜೆ ಸಹಾಯವಾಗಬಹುದು.
ಅಯೋಧ್ಯೆ ಜಿಲ್ಲೆಯ ಗೊಸೈಗಂಜ್ ವಿಧಾನಸಭಾ ಕ್ಷೇತ್ರದ ಬೆಲರಿಖಾನ್ ಗ್ರಾಮದಲ್ಲಿ ಹಿಂದೂಗಳು ಮುಸಲ್ಮಾನರಿಗೆ ಸ್ಮಶಾನ ಬಳಕೆಗಾಗಿ ಭೂಮಿಯನ್ನು ದಾನ ನೀಡಿದ್ದಾರೆ. ಹಲವು ದಶಕಗಳಿಂದ ಇಲ್ಲಿ ಹಿಂದೂ-ಮುಸ್ಲಿಂರು ಐಕ್ಯತೆಯಿಂದ ಬದುಕುತ್ತಿದ್ದಾರೆ. 
ಸ್ಥಳೀಯ ಸ್ವಾಮೀಜಿ ಸೂರ್ಯ ಕುಮಾರ್ ಝಿಂಕಾನ್ ಮಹಾರಾಜ ಮತ್ತು ಇನ್ನೂ 8 ಮಂದಿ ಪಾಲುದಾರ ಹಿಂದೂಗಳು ಕಳೆದ ಜೂನ್ 20ರಂದು 1.25 ಎಕರೆ ಭೂಮಿಯ ರಿಜಿಸ್ಟ್ರರ್ ಡೀಡ್ ಗೆ ಸಹಿ ಹಾಕಿದ್ದಾರೆ.
ಈ ಜಮೀನು ದಾಖಲಾತಿ ಪ್ರಕಾರ ಹಿಂದೂಗಳಿಗೆ ಸೇರಿದ್ದಾಗಿದೆ. ಈ ಜಮೀನು ಸ್ಮಶಾನಕ್ಕೆ ಹತ್ತಿರವಾಗಿದೆ. ಕೆಲವು ಮುಸಲ್ಮಾನರು ಸತ್ತವರ ಹೆಣವನ್ನು ಈ ಜಮೀನಿನಲ್ಲಿ ಹೂತಿದ್ದರು. ಹೀಗಾಗಿ ಜಮೀನು ತಕರಾರಿನಲ್ಲಿತ್ತು. ಕೊನೆಗೆ ಆ ಜಮೀನನ್ನು ಮುಸಲ್ಮಾನರಿಗೆ ನೀಡಿ ವಿವಾದ ಇತ್ಯರ್ಥಪಡಿಸಿದ್ದೇವೆ ಎನ್ನುತ್ತಾರೆ ಜಿಂಕಾನ್ ಮಹಾರಾಜ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com