ಜೈ ಶ್ರೀರಾಮ್ ಘೋಷಣೆ ಕೂಗದೆ ರೈಲಿನಿಂದ ತಳಲ್ಪಟ್ಟು ಗಾಯಗೊಂಡಿದ್ದ ಮೂವರಿಗೆ 50 ಸಾವಿರ ರೂ.ಪರಿಹಾರ

ಜೈ ಶ್ರೀರಾಮ ಘೋಷಣೆ ಕೂಗದೆ ರೈಲಿನಿಂದ ತಳಲ್ಪಟ್ಟು ಗಾಯಗೊಂಡಿದ್ದ ಮೂವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
ಕೊಲ್ಕತ್ತಾ: ಜೈ ಶ್ರೀರಾಮ ಘೋಷಣೆ ಕೂಗದೆ ರೈಲಿನಿಂದ ತಳಲ್ಪಟ್ಟು ಗಾಯಗೊಂಡಿದ್ದ ಮೂವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಜೈ ಶ್ರೀರಾಮ್ ಘೋಷಣೆ ಕೂಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮದರಾಸ ಶಿಕ್ಷಕರು ಹಾಗೂ ಇನ್ನಿಬ್ಬರನ್ನು ಚಲಿಸುತ್ತಿರುವ ರೈಲಿನಿಂದ ಸೋಮವಾರ ತಳ್ಳಲಾಗಿತ್ತು.
ಈ ಘಟನೆಯನ್ನು ತೀವ್ರವಾಗಿ  ಖಂಡಿಸುವುದಾಗಿ ಹೇಳಿರುವ ಮಮತಾ ಬ್ಯಾನರ್ಜಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ಇಂತಹ ಘಟನೆ ನಡೆಯಲು ಅವಕಾಶ ನೀಡುವುದಿಲ್ಲ.ಗಾಯಾಳುಗಳ ಜೊತೆಗೆ ಮಾತುಕತೆ ನಡೆಸಿದ್ದು, ಮೂವರಿಗೂ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಹಫೀಜ್ ಮೊಹಮ್ಮದ್ ಶಾರೂಖ್ ಹಲ್ಡರ್ ಎಂಬುವರಿಗೆ ಸಣ್ಣ ಗಾಯವಾಗಿದೆ. ಜೈ ಶ್ರೀರಾಮ್ ಘೋಷಣೆ ಕೂಗದ ಹಿನ್ನೆಲೆಯಲ್ಲಿ ಈತನ  ಮೇಲೆ ಗುಂಪಿನಲಿಂದ ಹಲ್ಲೆ ನಡೆಸಲಾಗಿದೆ ಎಂದು ಅವರು ಹೇಳಿದರು.ಭಾತ್ ಪಾತ್ರದಲ್ಲಿ ರಾಜಕೀಯ ಹಿಂಸಾಚಾರದಿಂದ ಗಾಯಗೊಂಡಿದ್ದ ಗಾಯಾಳುವಿಗೂ ಬ್ಯಾನರ್ಜಿ ಪರಿಹಾರ ಘೋಷಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com