ಗುಂಪು ಹಲ್ಲೆ ಘಟನೆ ತೀವ್ರ ನೋವು ತಂದಿದೆ, ಆದರೆ ಜಾರ್ಖಂಡ್ ಗೆ ಅವಮಾನ ಮಾಡಬೇಡಿ: ಪ್ರಧಾನಿ ಮೋದಿ

ಜಾರ್ಖಂಡ್ ನಲ್ಲಿ ನಿರ್ದಿಷ್ಟ ಸಮುದಾಯದ ವ್ಯಕ್ತಿಯೊಬ್ಬರ ಮೇಲೆ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ತಮಗೆ ತೀವ್ರ ನೋವು ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಗುಂಪು ಹಲ್ಲೆ ಘಟನೆ  ತೀವ್ರ ನೋವು ತಂದಿದೆ, ಆದರೆ ಜಾರ್ಖಂಡ್ ಗೆ ಅವಮಾನ ಮಾಡಬೇಡಿ: ಪ್ರಧಾನಿ  ಮೋದಿ
ಗುಂಪು ಹಲ್ಲೆ ಘಟನೆ ತೀವ್ರ ನೋವು ತಂದಿದೆ, ಆದರೆ ಜಾರ್ಖಂಡ್ ಗೆ ಅವಮಾನ ಮಾಡಬೇಡಿ: ಪ್ರಧಾನಿ ಮೋದಿ
ನವದೆಹಲಿ: ಜಾರ್ಖಂಡ್ ನಲ್ಲಿ ನಿರ್ದಿಷ್ಟ ಸಮುದಾಯದ   ವ್ಯಕ್ತಿಯೊಬ್ಬರ  ಮೇಲೆ  ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ತಮಗೆ ತೀವ್ರ ನೋವು ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ  ಹೇಳಿದ್ದಾರೆ.
ರಾಜ್ಯಪಾಲರ ಭಾಷಣ ಮೇಲಿನ  ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡುತ್ತಿದ್ದ ಅವರು, ಈ ಘಟನೆ ಇತರರಲ್ಲೂ ಯಾತನೆ ತರಿಸಿದೆ. ಆದರೆ ಇದೊಂದು ಘಟನೆಯ ಆಧಾರದ ಮೇಲೆ  ಇಡೀ ಜಾರ್ಖಂಡ್ ರಾಜ್ಯ ಗುಂಪು ಹಲ್ಲೆಗಳ ನೆಲೆ ಎಂದು ಕರೆಯುವುದು ಏಷ್ಟು ಸರಿ ಎಂದು  ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದರು.
ಗುಂಪು ಹಲ್ಲೆಗಾಗಿ ಇಡೀ ರಾಜ್ಯವನ್ನು ಅಪಮಾನಿಸುವುದು ಏಕೆ? ಎಂದು ಪ್ರಶ್ನಿಸಿದ ಪ್ರಧಾನಿ, ಜಾರ್ಖಂಡ್ ರಾಜ್ಯವನ್ನು ಅಪಮಾನಿಸುವ ಹಕ್ಕು ನಮಗಾರಿಗೂ ಇಲ್ಲ  ಎಂದು ಆಕ್ರೋಶ ವ್ಯಕ್ತಪಡಿಸಿದರು. ಗುಂಪು ಹಲ್ಲೆ ವಿಷಯದಲ್ಲಿ ಇಡೀ ರಾಜ್ಯವನ್ನು ದೂಷಿಸುವುದು ಸರಿಯಲ್ಲ.  ಹಿಂಸೆಯನ್ನು ಖಂಡಿಸೋಣ. ಗುಂಪು ಹಲ್ಲೆ ನಡೆಸಿದವರನ್ನು ಸರ್ಕಾರ ಕಾನೂನು ಕಕ್ಷೆಗೆ ಒಳಪಡಿಲಿದೆ ಎಂದು ಭರವಸೆ ನೀಡಿದರು.
ಜಾರ್ಖಂಡ್  ಅಥವಾ ಪಶ್ಚಿಮ ಬಂಗಾಳ ಅಥವಾ ಕೇರಳ ಎಲ್ಲೇ  ಹಿಂಸಾಚಾರ ಘಟನೆಗಳು ನಡೆದರೂ ಅವು ಖಂಡನೀಯ ಎಂದು ಪ್ರಧಾನಿ ಹೇಳಿದರು.
ಸಿಖ್ ವಿರೋಧಿ ಗಲಭೆಗಳ ಸೂತ್ರದಾರರು  ಸಾಂವಿಧಾನಿಕ  ಹುದ್ದೆಗಳಲ್ಲಿದ್ದಾರೆ ಎನ್ನುವ ಮೂಲಕ  ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಟೀಕಿಸಿದರು.   ರಾಷ್ಟ್ರೀಯ ಪೌರತ್ವ ನೋಂದಣಿ ವಿಷಯ ಕುರಿತು ಸದಸ್ಯರು ಘನತೆಯಿಂದ ಮಾತನಾಡಬೇಕು ಸರ್ಕಾರ ಸುಪ್ರೀಂ ಕೋರ್ಟ್ ಸೂಚನೆಯನ್ನು ಪಾಲಿಸುತ್ತಿದೆ  ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಸಹಿ ಹಾಕಿದ್ದ  ಒಪ್ಪಂದದ ಭಾಗವಾಗಿ ರಾಷ್ಟ್ರೀಯ ಪೌರತ್ವ ನೋಂದಣಿ ನಡೆಸಲಾಗಿದೆ ಎಂದು ಸಮರ್ಥಿಸಿಕೊಂಡರು.
ರಾಜ್ಯಸಭೆಯ ಕಾಂಗ್ರೆಸ್ ನಾಯಕ  ಗುಲಾಂ ನಬಿ ಆಜಾದ್   ಜಾರ್ಖಂಡ್ ಗುಂಪು ಹಲ್ಲೆಯನ್ನು ಮೊನ್ನೆ ರಾಜ್ಯಸಭೆಯಲ್ಲಿ   ಪ್ರಸ್ತಾಪಿಸಿ  ಇಡೀ ಜಾರ್ಖಂಡ್ ರಾಜ್ಯ ಗುಂಪು ಹಲ್ಲೆಯ ನೆಲೆಯಾಗಿದೆ, ಬಿಜೆಪಿ ಸರ್ಕಾರದ "ನವಭಾರತ" ದೇಶಾದ್ಯಂತ  ನಿರ್ಧಿಷ್ಟ ಸಮುದಾಯದ ಮೇಲಿನ  ಗುಂಪು ಹಲ್ಲೆಗಳು ಪ್ರಸ್ತಾಪಿಸಿ,  ನಮಗೆ  "ನವಭಾರತ"  ಬೇಡ, ಹಿಂದೂ ಮುಸ್ಲಿಮರು ಕೂಡಿ ಶಾಂತಿ, ನೆಮ್ಮದಿಯಿಂದ  ಬದುಕುತ್ತಿದ್ದ ಹಳೆಯ ಭಾರತ ಬೇಕು ಎಂದು ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com