ಅಧಿಕೃತ ನಿವಾಸ ತೆರವುಗೊಳಿಸಿದ ಸುಷ್ಮಾ ಸ್ವರಾಜ್

ಬಿಜೆಪಿ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಷ್ಟ್ರ ರಾಜಧಾನಿಯ ಸಫ್ದರ್ ಜಂಗ್ ಲೇನ್ ನಲ್ಲಿನ ಅಧಿಕೃತ ನಿವಾಸವನ್ನು ತೆರವುಗೊಳಿಸಿದ್ದಾರೆ.
ಅಧಿಕೃತ ನಿವಾಸ ತೆರವುಗೊಳಿಸಿದ ಸುಷ್ಮಾ ಸ್ವರಾಜ್
ಅಧಿಕೃತ ನಿವಾಸ ತೆರವುಗೊಳಿಸಿದ ಸುಷ್ಮಾ ಸ್ವರಾಜ್
ನವದೆಹಲಿ: ಬಿಜೆಪಿ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಷ್ಟ್ರ ರಾಜಧಾನಿಯ ಸಫ್ದರ್ ಜಂಗ್ ಲೇನ್ ನಲ್ಲಿನ ಅಧಿಕೃತ ನಿವಾಸವನ್ನು ತೆರವುಗೊಳಿಸಿದ್ದಾರೆ.
“ಸಫ್ದರ್ ಜಂಗ್ ಲೇನ್ ನಲ್ಲಿ ನೀಡಲಾಗಿದ್ದ ಅಧಿಕೃತ ನಿವಾಸವನ್ನು ತೆರವುಗೊಳಿಸಿ ಹೊರಬಂದಿದ್ದೇನೆ  ಹೀಗಾಗಿ ಈ ಮೊದಲಿನ ನಿವಾಸ ಹಾಗೂ ದೂರವಾಣಿ ಸಂಖ್ಯೆಯಲ್ಲಿ ಲಭ್ಯವಿರುವುದಿಲ್ಲ” ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸುಷ್ಮಾ ಪ್ರಕಟಿಸಿದ್ದಾರೆ.
ಲೋಕಸಭೆಯಲ್ಲಿ 2009 ಮತ್ತು 2014ರಲ್ಲಿ ವಿಪಕ್ಷ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್, ಆರೋಗ್ಯದ ಕಾರಣಗಳಿಗಾಗಿ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.
ನಿಯಮದ ಪ್ರಕಾರ ಮಾಜಿ ಸಂಸದರು ಲೋಕಸಭೆ ವಿಸರ್ಜನೆಯಾದ ತಿಂಗಳಲ್ಲಿ ನಿವಾಸವನ್ನು ತೆರವುಗೊಳಿಸಬೇಕಾಗುತ್ತದೆ. 16ನೇ ಲೋಕಸಭೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೇ 25ರಂದು ವಿಸರ್ಜಿಸಿದ್ದರು.
ಈ ತಿಂಗಳ ಆರಂಭದಲ್ಲಿ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿಯವರೂ ಸಹ ಅಧಿಕೃತ ನಿವಾಸ ತೆರವುಗೊಳಿಸಿ ದಕ್ಷಿಣ ದೆಹಲಿಯ ತಮ್ಮ ಖಾಸಗಿ ಬಂಗಲೆಗೆ ತೆರಳಿದ್ದು. ಅನಾರೋಗ್ಯದ ಹಿನ್ನೆಲೆಯಲ್ಲಿ ಸ್ವತಃ ಸಂಪುಟದಿಂದ ಹೊರಬರುವ ನಿರ್ಧಾರ ಕೈಗೊಂಡಿದ್ದ ಜೇಟ್ಲಿಯವರು ರಾಜ್ಯಸಭೆಯ ಸದಸ್ಯರಾಗಿ ಮುಂದುವರಿಯಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com