ಎಲ್ಲರನ್ನೂ ಒಳಗೊಂಡ ಭಾರತವನ್ನು ನಾನು ಪ್ರತಿನಿಧಿಸುತ್ತಿದ್ದೇನೆ: ಸಂಸದೆ ನುಸ್ರತ್ ಜಹಾನ್ ಪ್ರತಿಕ್ರಿಯೆ

ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕಾರದ ವೇಳೆ ತಮ್ಮ ಧರ್ಮದ ಬುರ್ಖಾ ತೊಡದೆ ಸಿಂಧೂರ ಮತ್ತು ...
ತೃಣಮೂಲ ಕಾಂಗ್ರೆಸ್ ಸಂಸದಾರ ಮಿಮಿ ಚಕ್ರವರ್ತಿ ಮತ್ತು ನುಸ್ರತ್ ಜಹಾನ್ ಸಂಸತ್ತಿನ ಆವರಣದಲ್ಲಿ ತೆಗೆಸಿಕೊಂಡ ಫೋಟೋ
ತೃಣಮೂಲ ಕಾಂಗ್ರೆಸ್ ಸಂಸದಾರ ಮಿಮಿ ಚಕ್ರವರ್ತಿ ಮತ್ತು ನುಸ್ರತ್ ಜಹಾನ್ ಸಂಸತ್ತಿನ ಆವರಣದಲ್ಲಿ ತೆಗೆಸಿಕೊಂಡ ಫೋಟೋ
ಕೋಲ್ಕತ್ತಾ: ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕಾರದ ವೇಳೆ ತಮ್ಮ ಧರ್ಮದ ಬುರ್ಖಾ ತೊಡದೆ ಸಿಂಧೂರ ಮತ್ತು ಬಳೆಗಳನ್ನು ಉಟ್ಟು ಸೀರೆ ತೊಟ್ಟಿದ್ದಕ್ಕೆ ಫತ್ವಾ ಹೊರಡಿಸಿರುವ ಬಗ್ಗೆ ನಟಿ ಹಾಗೂ ರಾಜಕಾರಣಿ ನುಸ್ರತ್ ಜಹಾನ್ ಪ್ರತಿಕ್ರಿಯೆ ನೀಡಿದ್ದು, ತಾನು ಎಲ್ಲರನ್ನೂ ಒಳಗೊಂಡ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ ಎಂದಿದ್ದಾರೆ.
ಎಲ್ಲರನ್ನೂ ಒಳಗೊಂಡ ವೈವಿಧ್ಯತೆಯ ಭಾರತವನ್ನು ನಾನು ಪ್ರತಿನಿಧಿಸುತ್ತಿದ್ದೇನೆ. ಅದು ಜಾತಿ, ಧರ್ಮ, ಮತಗಳ ಅಡೆತಡೆಗಳನ್ನು ಮೀರಿದ್ದಾಗಿದೆ ಎಂದು ಜಹಾನ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ತಾವು ಎಲ್ಲಾ ಧರ್ಮವನ್ನು ಗೌರವಿಸುತ್ತೇನೆ ಎಂದು ನುಸ್ರತ್ ಜಹಾನ್ ಹೇಳಿದ್ದಾರೆ.
ನಾನು ಇನ್ನೂ ಮುಸ್ಲಿಂ ಧರ್ಮಕ್ಕೆ ಸೇರಿದವಳಾಗಿದ್ದು, ನಾನು ಏನು ಧರಿಸಬೇಕು ಎಂದು ಬೇರೆಯವರು ನನಗೆ ಹೇಳಬೇಕಾಗಿಲ್ಲ. ನಂಬಿಕೆ ಉಡುಪನ್ನು ಮೀರಿದ್ದಾಗಿದೆ. ಎಲ್ಲಾ ಧರ್ಮಗಳ ಅಮೂಲ್ಯವಾದ ಸಿದ್ಧಾಂತಗಳನ್ನು ನಂಬುವ ಮತ್ತು ಅಭ್ಯಾಸ ಮಾಡುವ ಬಗ್ಗೆಯಾಗಿದೆ ಎಂದು ಜಹಾನ್ ಹೇಳಿದ್ದಾರೆ.
ನುಸ್ರತ್ ಜಹಾನ್ ಮದುವೆಯಾಗಿದ್ದು ಜೈನ್ ಧರ್ಮಕ್ಕೆ ಸೇರಿದ ನಿಖಿಲ್ ಜೈನ್ ಎಂಬುವವರನ್ನು. ಮದುವೆ ನಂತರ ನುಸ್ರತ್ ಜಹಾನ್ ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕಾರದ ವೇಳೆ ಹಿಂದೂ ಧರ್ಮದ ವೇಷ-ಭೂಷಣ ತೊಟ್ಟಿದ್ದರು. ಇದಕ್ಕೆ ಮುಸ್ಲಿಂ ಮೌಲ್ವಿಗಳು ಫತ್ವಾ ಹೊರಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com