ಲೋಕಸಭಾ ಚುನಾವಣೆ: ದೆಹಲಿಯ 7 ಸ್ಥಾನಗಳ ಪೈಕಿ ಆರು ಕ್ಷೇತ್ರಗಳ ಎಎಪಿ ಅಭ್ಯರ್ಥಿಗಳ ಘೋಷಣೆ

ಮುಂಬರುವ ಲೋಕಸಭಾ ಚುನಾವಣೆಗಾಗಿ ದೆಹಲಿಯ ಏಳು ಸ್ಥಾನಗಳ ಪೈಕಿ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಆಮ್ ಆದ್ಮಿ ಪಕ್ಷ ಇಂದು ಪ್ರಕಟಿಸಿದ್ದು,ಕಾಂಗ್ರೆಸ್ ಜೊತೆಗಿನ ಮೈತ್ರಿ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗಾಗಿ ದೆಹಲಿಯ ಏಳು ಸ್ಥಾನಗಳ ಪೈಕಿ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಆಮ್ ಆದ್ಮಿ ಪಕ್ಷ ಇಂದು ಪ್ರಕಟಿಸಿದ್ದು,ಕಾಂಗ್ರೆಸ್ ಜೊತೆಗಿನ ಮೈತ್ರಿ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಎಎಪಿ ಸಂಚಾಲಕ ಗೋಪಾಲ್ ರೈ, ಅಟಿಸಿ- ಪೂರ್ವ ದೆಹಲಿ,  ಗುಗ್ಗನ್ ಸಿಂಗ್ - ವಾಯುವ್ಯ ದೆಹಲಿ, ರಾಘವ್ ಚಂದಾ- ದಕ್ಷಿಣ ದೆಹಲಿ, ದಿಲೀಪ್ ಪಾಂಡ್ಯ- ಈಶಾನ್ಯ, ಪಂಕಜ್ ಗುಪ್ತಾ- ಚಾಂದಿನಿ ಚೌಕಾ, ಬ್ರಿಜೇಶ್ - ಗೊಯೆಲ್  ನವದೆಹಲಿಯ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಪಶ್ಚಿಮ ದೆಹಲಿ ಕ್ಷೇತ್ರದ ಅಭ್ಯರ್ಥಿಯನ್ನು ಶೀಘ್ರದಲ್ಲಿಯೇ ಘೋಷಿಸಲಾಗುವುದು ಎಂದು ರೈ ಹೇಳಿದ್ದಾರೆ.  ಇಂದು ಘೋಷಿಸಲಾಗಿರುವ ಆರು ಮಂದಿಯನ್ನು ಈಗಾಗಲೇ ಅವರ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು.

ಕಳೆದ ತಿಂಗಳ ಎನ್ ಸಿಪಿ ನಾಯಕ ಶರದ್ ಪವಾರ್ ಅವರ ನಿವಾಸದಲ್ಲಿ ಮಹಾಘಟಬಂದನ್ ಸಂಬಂಧ ನಡೆದ ಚರ್ಚೆಯ ವೇಳೆಯಲ್ಲಿ ಎಎಪಿ ಜೊತೆಗೆ ಮೈತ್ರಿ ಪ್ರಸ್ತಾವವನ್ನು  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿರಸ್ಕರಿಸಿದ್ದರು ಎಂದು ರೈ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com