ಪೂಂಚ್, ರಜೌರಿಗೆ 400 ಹೆಚ್ಚುವರಿ ಬಂಕರ್ ಮಂಜೂರು

ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ರೇಖೆಯ ಬಳಿ ಪಾಕ್ ಸೇನೆ ಪದೇ ಪದೆ ಅಪ್ರಚೋದಿತ ಶೆಲ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೂಂಚ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜಮ್ಮು: ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ರೇಖೆಯ ಬಳಿ ಪಾಕ್ ಸೇನೆ ಪದೇ ಪದೆ ಅಪ್ರಚೋದಿತ ಶೆಲ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೂಂಚ್ ಮತ್ತು ರಜೌರಿ ಜಿಲ್ಲೆಗಳಿಗೆ ತಲಾ 200 ಹೆಚ್ಚುವರಿ ಬಂಕರ್ ಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮಂಜೂರು ಮಾಡಿದೆ.
ಈ ಬಂಕರ್ ಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಅನುದಾನ ಲಭ್ಯವಾಗಲಿದ್ದು, ಶೀಘ್ರಗತಿಯಲ್ಲಿ ಬಂಕರ್ ಗಳ ನಿರ್ಮಾಣಕಾರ್ಯ ಆರಂಭಿಸುವಂತೆ ಸರ್ಕಾರ ನಿರ್ದೇಶಿಸಿದೆ. ಹೀಗಾಗಿ ಇನ್ನೊಂದು ತಿಂಗಳಲ್ಲಿ ಬಂಕರ್ ಗಳ ನಿರ್ಮಾಣ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.
ಗಡಿಯಲ್ಲಿ ಬಂಕರ್ ಗಳ ನಿರ್ಮಾಣ ಪಾಕ್ ಶೆಲ್‍ ದಾಳಿಗೆ ಪರಿಣಾಮಕಾರಿ ಜವಾಬು ನೀಡಿದಂತಾಗಲಿದೆ.  ಶೆಲ್ ದಾಳಿಯ ಸಂದರ್ಭದಲ್ಲಿ ರಕ್ಷಣೆ ಪಡೆಯಲು ಅನುಕೂಲವಾಗಲಿದೆ ಎಂದು ರಜೌರಿ ಹಾಗೂ ಪೂಂಚ್ ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com